ಬಿಜೆಪಿಯವರ ಆರೋಪ ಪುಕ್ಕಟೆ ಪ್ರಚಾರದ ಸ್ಟಂಟ್

0
11
ಜಗದೀಶ ಶೆಟ್ಟರ್‌

ಹುಬ್ಬಳ್ಳಿ: ಬಿಜೆಪಿ ನಾಯಕರು ಬರೀ ಪ್ರಚಾರಕ್ಕಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳು ಹೇಳಿ ಪುಕ್ಕಟೆ ಪ್ರಚಾರ ಪಡೆಯುವುದು ಬಿಟ್ಟರೆ ಏನೂ ಹುರುಳಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಶಶಿ ತರೂರ್ ಅವರಿಗೆ ಪತ್ರ ಬರೆದು ದೂರು ನೀಡಿದ್ದಾರೆ ಎಂಬುದಕ್ಕೆ ಅರ್ಥವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಟೀಕಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಶಿ ತರೂರ್ ಅವರಿಗೆ ದೂರು ನೀಡಿದ್ದಾರೆನ್ನುವ ಬಿಜೆಪಿಯವರು ದೂರು ನೀಡುವಾಗ ಅಲ್ಲಿದ್ದರೆ? ಕುರುಕ್ಷೇತ್ರದಲ್ಲಿ ಯುದ್ಧ ನಡೆಯುವಾಗ ಧೃತರಾಷ್ಟç ಮಹಾರಾಜನಿಗೆ ಸಂಜಯ ನೇರ ವಿವರಣೆ (ಲೈವ್) ನೀಡುತ್ತಿದ್ದ. ಹಾಗೆ ಬಿಜೆಪಿಯವರೂ ಯಾರನ್ನಾದ್ದರೂ ಇಟ್ಟಿದ್ದರೆ ಎಂದು ಲೇವಡಿ ಮಾಡಿದರು.
ಹಿಂದೆಯೂ ಬೆಂಗಳೂರಿನಲ್ಲಿ ೮೦ ಕೋಟಿ ಹಣ ಸಿಕ್ಕಿದ್ದ ವಿಚಾರದಲ್ಲಿ, ತೆಲಂಗಾಣದ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ೧,೦೦೦ ಕೋಟಿ ಹಣ ಹರಿಸಿದ ಎಂದು ಆರೋಪಿಸಿದ್ದರು. ಯಾವುದಕ್ಕೂ ಆಧಾರ ಇಲ್ಲ. ಆಧಾರ ರಹಿತ ಆರೋಪ ಮಾಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು ಎಂದು ಶೆಟ್ಟರ ಹೇಳಿದರು.

Previous articleಡಿಕೆಶಿ ಜೈಲಿಗೆ ಹೋಗೋದು ನಿಶ್ಚಿತ
Next articleಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು