ಬಿಎಸ್​ಎನ್​ಎಲ್ ಜನರಲ್ ಮ್ಯಾನೇಜರ್ ಕಾರು ಜಪ್ತಿ

0
22

ವಿಜಯಪುರ : ಭಾರತ ಸಂಚಾರ ನಿಗಮ ಲಿಮಿಟೆಡ್ ಜನರಲ್ ಮ್ಯಾನೇಜರ್ ಸರ್ಕಾರದಿಂದ ತಮಗೆ ನೀಡಿದ್ದ ವಾಹನವನ್ನು ಬಿಟ್ಟು, ಅದೇ ವಾಹನದ ಹೆಸರಿನಲ್ಲಿ ಬೇರೆ ವಾಹನ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪ ಹಾಗೂ ದೂರು ಬಂದ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್‌ರು ಕಾರನ್ನು ಜಪ್ತಿ ಮಾಡಿದ್ದಾರೆ.

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟ ಮೂರು ಜಿಲ್ಲೆಗಳ ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ಆಗಿರುವ ವಿಕಾಸ್ ಜೈಕರ್ ಎಂಬುವವರು ಟೆಂಡರ್‌ನಲ್ಲಿ ಅವರಿಗೆ ನೀಡಿರುವ ಎಲ್ಲೋ ಬೋರ್ಡ್ ಹೊಂದಿರುವ ಕಾರನ್ನು ಬಳಕೆ ಮಾಡದೇ ಟೆಂಡರ್ ಪಡೆದಿರುವ ಖಾಸಗಿ ವಾಹನ ಮಾಲೀಕರೊಂದಿಗೆ ಸಹಕರಿಸಿ ಐಶಾರಾಮಿ ಕಾರನ್ನು ತೆಗೆದುಕೊಂಡು ವಿಜಯಪುರ ಕಚೇರಿಗೆ ಬರುತ್ತಾರೆ ಎನ್ನುವ ಆರೋಪ ಬಂದಿದೆ.

ಅಲ್ಲದೆ ನಮ್ಮದೇ (ಬಿ ಎಸ್ ಎನ್ ಎಲ್ ನ) ಸೇರಿದ ಪ್ರವಾಸಿ ಮಂದಿರವಿದ್ದರೂ ಸಹಿತ ಎನ್ ಟಿ ಪಿ ಸಿ ಅಥವಾ ಪಿಡಬ್ಲ್ಯೂಡಿ ಪ್ರವಾಸಿ ಮಂದಿರ ಉಪಯೋಗಿಸುತ್ತಿದ್ದಾರೆ. ಕಛೇರಿ ಕೆಲಸಕ್ಕೆ ಬರುವ ಇವರು ಹೆಂಡತಿ ಕರೆದುಕೊಂಡು ಖಾಸಗಿ ಕಾರಿನಲ್ಲಿ ವಿಜಯಪುರಕ್ಕೆ ಬರುತ್ತಾರೆ ಎಂದು ಗಂಭೀರ ಆರೋಪವನ್ನು ಬಿಎಸ್ಎನ್ಎಲ್ ಸಿನೀಯರ್ ಆಫೀಸ್ ಅಸೋಸಿಯೇಟ್ ಸುರೇಶ ಬಿರಾದಾರ ಮಾಡುತ್ತಿದ್ದಾರೆ.

ಅಧಿಕಾರಿ ವಿಕಾಸ್ ಜೈಕರ್ ಅವರಿಗೆ ಬಿಎಸ್ಎನ್ಎಲ್ ನಿಂದ KA 22 C 8059 ಎಲೋ ಬೋರ್ಡ್ ಕಾರ್ ನೀಡಲಾಗಿತ್ತು. ಆದರೆ KA 22 MB 0494 ನಂಬರಿನ ಕಾರ್ ಬಳಕೆ ಮಾಡುತ್ತಿದ್ದು ಇದೆ ಗಾಡಿಯ ರೀಡಿಂಗ್ ತೋರಿಸಿ ಬಿಲ್ ತೆಗೆದುಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಕುರಿತು 112 ಗೆ ಕರೆ ಮಾಡಿದ ಬಿಎಸ್ಎನ್ಎಲ್ ನೌಕರ ಸ್ಥಳಕ್ಕೆ 112 ಪೊಲೀಸರ ಆಗಮಿಸಿ ವಾಹನ ಪರಿಶೀಲನೆ ಮಾಡಿದ್ದು ಗಾಂಧಿ ಚೌಕ್ ಪೊಲೀಸ್ ಠಾಣೆಗೆ ವಾಹನ ಎಳೆದುಕೊಂಡು ಹೋಗಿದ್ದಾರೆ.

Previous articleಪದಗಳಲ್ಲಿ ವರ್ಣಿಸಲಾಗದಷ್ಟು ಶಾಂತಿ…
Next article371(ಜೆ) ದಶಮಾನೋತ್ಸವ