ಬಿಎಂಟಿಸಿ ಬಸ್- ಕಾರು ನಡುವೆ ಡಿಕ್ಕಿ: ಹೊತ್ತಿ ಉರಿದ ಕಾರು

0
15

ಬೆಂಗಳೂರು: ಬಿಎಂಟಿಸಿ ಬಸ್​ಗೆ ಕಾರ್ ಡಿಕ್ಕಿಯಾಗಿ ಬೆಂಕಿ ಹತ್ತಿಕೊಂಡಿದ್ದು ಕಾರು ಅಗ್ನಿಗಾಹುತಿಯಾದ ಘಟನೆ ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.
ವೇಗವಾಗಿ ಬಂದ ಕಾರು ಹಿಂಬದಿಯಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉಂಟಾದ ಘರ್ಷಣೆಯಿಂದ ಬೆಂಕಿ ಹತ್ತಿಕೊಂಡಿದ್ದು, ಕಾರು ಪೂರ್ತಿಯಾಗಿ ಅಗ್ನಿಗಾಹುತಿಯಾಯಿತು. ಬಸ್ಸಿನ ಹಿಂಬದಿ ಆಸನಗಳು ಸುಟ್ಟು ಕರಕಲಾಗಿವೆ. ಕಾರು ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಎಂಟಿಸಿ ಬಸ್​ ಚಾಲಕ ಪ್ರಯಾಣಿಕರ ರಕ್ಷಣೆ ಮಾಡುವುದರ ಜೊತೆಗೆ ಬಿಎಂಟಿಸಿ ಬಸ್ ರಕ್ಷಣೆ ಸಹ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Previous articleಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ
Next articleಅಂದು ಮನೆ ಮನೆಯಲ್ಲಿ ಮೋದಿ, ಇಂದು ಮನ ಮನದಲ್ಲೂ ಮೋದಿ