ಬಾನು ಮುಷ್ತಾಕ್ ಅವರು ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ

ಬೆಂಗಳೂರು: ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರೂ.ಗಳನ್ನು ಗೌರವಪೂರ್ವಕವಾಗಿ ಘೋಷಿಸುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು, ಮಾತನಾಡಿರುವ ಅವರು ಶ್ರೀಮತಿ ಬಾನು ಅವರು ಕನ್ನಡದ ಕೃತಿಯ ಮೂಲಕ ಬೂಕರ್ ಪ್ರಶಸ್ತಿಗೆ ಭಾಜನರಾಗಿ ಜಗತ್ತಿಗೆ ಕನ್ನಡದ ಜ್ಯೋತಿಯನ್ನು ಬೆಳಗಿ ಕನ್ನಡವನ್ನು ಉಳಿಸಿದ್ದಾರೆ. ಅನುವಾದವನ್ನು ಮಾಡಿರುವ ಶ್ರೀಮತಿ ದೀಪಾ ಅವರು ದೇಶಕ್ಕೆ ಆರತಿಯಾಗಿದ್ದಾರೆ ಎಂದು ಹೆಮ್ಮೆಪಡುತ್ತೇನೆ. ಇಬ್ಬರು ಸಾಧಕರು ಸಪ್ತಸಾಗರದಾಚೆ ಕರ್ನಾಟಕಕ್ಕೆ ಗೌರವವನ್ನು ತಂದಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಅವರ ಭಾಷೆ, ಸಂಸ್ಕೃತಿ ಮುಖ್ಯ. ನಮ್ಮ ಭಾಷೆ ಮತ್ತು ನಾಡಿನ ಗೌರವವನ್ನು ಹೆಚ್ಚಿಸಿದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ಅವರಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರೂ.ಗಳನ್ನು ಗೌರವಪೂರ್ವಕವಾಗಿ ಘೋಷಿಸುತ್ತಿದ್ದೇನೆ ಎಂದಿದ್ದಾರೆ.