ಬಸ್ ಪಲ್ಟಿ: ಪ್ರಯಾಣಿಕರಿಗೆ ಗಾಯ

0
19

ಬಾಗಲಕೋಟೆ : ತಾಲೂಕಿನ ಮನ್ನಿಕಟ್ಟಿ ಕ್ರಾಸ್ ಬಳಿ ಬಸ್ ಅಪಘಾತಕ್ಕೀಡಾಗಿದ್ದು, ಪ್ರಯಾಣಿಕರಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ.
ಮುದ್ದೇಬಿಹಾಳದಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಬಸ್ ಚಾಲಕ ಎದುರಿಗೆ ಬಂದ ಟ್ಯಾಂಕರ್ ತಪ್ಪಿಸಲು ಪ್ರಯತ್ನಿಸಿದಾಗ ಬಸ್ ಪಲ್ಟಿಯಾಗಿದೆ. ಪ್ರಯಾಣಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಿವಾಹ ವ್ಯವಹಾರವಲ್ಲ, ಅದು ಸಂಸ್ಕೃತಿಗೆ ಆಧಾರ
Next articleಗ್ಯಾರಂಟಿ ಯೋಜನೆ: ಹಿಮಾಚಲದಂತೆ ಕರ್ನಾಟಕವು ಹಿಂತೆಗೆದುಕೊಳ್ಳುವದೇ…