ಬಸ್ ಕಿಟಕಿಯಿಂದ ಉಗುಳಲೂ ಹೋಗಿ ಮಹಿಳೆಯ ತಲೆ ಲಾಕ್

0
6

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ದೃಶ್ಯ

ಬೆಂಗಳೂರು: ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಅರ್ಧ ಗಾಜು ಮುಚ್ಚಿದ ಚಿಕ್ಕ ಕಿಟಕಿಯೊಳಗೆ ಮಹಿಳೆಯೊಬ್ಬಳು ತಲೆ ತೂರಿಸಿ ಪರದಾಡಿದ ಘಟನೆ ನಡೆದಿದೆ.
ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಉಗುಳುವ ಬರದಲ್ಲಿ ಕಿಟಕಿಯೊಳಗೆ ತಲೆ ತೂರಿಸಿರುವ ಮಹಿಳೆ ಹಿಂದಕ್ಕೆ ಎಳೆಯಲು ಹರಸಾಹಸ ಪಟ್ಟಿದ್ದಾಳೆ. ಎಷ್ಟೇ ಪ್ರಯತ್ನಿಸಿದರೂ ಮಹಿಳೆ ತಲೆಯನ್ನ ಕಿಟಕಿಯಿಂದ ಹಿಂದಕ್ಕೆ ತೆಗೆಯಲು ಆಗಿಲ್ಲ. ಈ ವೇಳೆ ಮಹಿಳೆ ಪರದಾಡುತ್ತಿರುವುದನ್ನ ಗಮನಿಸಿದ ಕೆಎಸ್‌ಅರ್‌ಟಿಸಿ ಬಸ್‌ನ ಚಾಲಕ, ಕಾರ್ಯನಿರ್ವಾಹಕ ದಾರಿ ಮಧ್ಯೆ ಬಸ್ ನಿಲ್ಲಿಸಿ ಬಳಿಕ ಜಾಗರೂಕತೆಯಿಂದ ಮಹಿಳೆಯನ್ನ ಕಿಟಕಿಯಿಂದ ಸುರಕ್ಷಿತವಾಗಿ ತೆಗೆದಿದ್ದಾರೆ.

Previous articleರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ
Next articleಕರ್ನಾಟಕದಲ್ಲಿ ಹೆಣ್ಣು ಮಕ್ಕಳು ‘ಕೊಲೆ ಭಾಗ್ಯ’ ಕಾಣುವಂತಾಗಿದೆ