Home Advertisement
Home ತಾಜಾ ಸುದ್ದಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಡಿಐಜಿ ಟಿ.ಪಿ.ಶೇಷ

ಬಳ್ಳಾರಿ ಸೆಂಟ್ರಲ್ ಜೈಲಿಗೆ ಡಿಐಜಿ ಟಿ.ಪಿ.ಶೇಷ

0
116

ಬಳ್ಳಾರಿ: ಕೊಲೆ ಆರೋಪಿ, ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಿದ ಹಿನ್ನೆಲೆಯಲ್ಲಿ ಉತ್ತರ ವಲಯ ಕಾರಗೃಹ ಡಿಐಜಿ ಟಿ.ಪಿ.ಶೇಷ ಶನಿವಾರ ಭೇಟಿ ನೀಡಿದರು.
ಬೆಳಗ್ಗೆ ಬಳ್ಳಾರಿಗೆ ಆಗಮಿಸಿದ್ದ ಟಿ.ಪಿ.ಶೇಷ ಅವರು ಮಧ್ಯಾಹ್ನ ೧೨.೩೦ ಗಂಟೆ ಸುಮಾರಿಗೆ ಜೈಲಿಗೆ ಆಗಮಿಸಿದರು. ಹೈ ಸೆಕ್ಯೂರಿಟಿ ಇರುವ ಸೆಲ್ ನಲ್ಲಿ ದರ್ಶನ್ ಇರಿಸಲಾಗಿದ್ದು, ಅದೇ ವಿಭಾಗಕ್ಕೆ ಭೇಟಿ ನೀಡಿದ ಡಿಐಜಿ ಜೈಲು ಭದ್ರತೆಯನ್ನು ಪರಿಶೀಲಿಸಿದರು. ಸಿಬ್ಬಂದಿ ಜತೆ ಕೆಲ ಹೊತ್ತು ಚರ್ಚೆ ಮಾಡಿ ದರ್ಶನ್ ಚಲನವಲನ, ಭದ್ರತೆಗಾಗಿ ನೇಮಕ ಮಾಡಿದ ಸಿಬ್ಬಂದಿಗಳ ಮಾಹಿತಿ, ಜೈಲಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಅಂಕಿ-ಸಂಖ್ಯೆ, ವಿಚಾರಾಧೀನ ಕೈದಿಗಳು, ಶಿಕ್ಷಾ ಬಂಧಿಗಳ ಮಾಹಿತಿಯನ್ನು ಪಡೆದುಕೊಂಡರು.

Previous articleಡಿಸಿಎಂ ಡಿಕೆಶಿ ನೇತೃತದಲ್ಲಿ ರಾಜಭವನ ಚಲೋ
Next articleಇಂದಿನ ಏರ್ ಶೋ ರದ್ದು