Home Advertisement
Home ನಮ್ಮ ಜಿಲ್ಲೆ ಬಡ ಅರ್ಚಕರ ಜೀವನಕ್ಕೂ ಕಲ್ಲು

ಬಡ ಅರ್ಚಕರ ಜೀವನಕ್ಕೂ ಕಲ್ಲು

0
72

ಬೆಂಗಳೂರು: ರಾಜ್ಯ ಸರ್ಕಾರ, ಬಡ ಅರ್ಚಕರ ಜೀವನಕ್ಕೂ ಕಲ್ಲು ಹಾಕಲು ಹೊರಟಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದ ಆರ್ಥಿಕತೆಯನ್ನು ಹದೆಗೆಡಿಸಿರುವ ರಾಜ್ಯ ಸರ್ಕಾರ, ಬಡ ಅರ್ಚಕರ ಜೀವನಕ್ಕೂ ಕಲ್ಲು ಹಾಕಲು ಹೊರಟಿದೆ. ರಾಮ ವಿರೋಧಿ ಕಾಂಗ್ರೆಸ್‌ ಸರ್ಕಾರ ಹಿರೇಮಗಳೂರಿನ ಶ್ರೀ ಕೋದಂಡ ಕಲ್ಯಾಣರಾಮ ದೇವಾಲಯದ ಅರ್ಚಕರಾದ ಶ್ರೀ ಹಿರೇಮಗಳೂರು ಕಣ್ಣನ್‌ ಅವರಿಗೆ 10 ವರ್ಷದ ಸಂಬಳ ವಾಪಾಸು ಕೊಡುವಂತೆ ಆದೇಶ ಮಾಡಿದೆ. ರಾಜ್ಯದ ಅಭಿವೃದ್ಧಿ ಮಾಡಲಾಗದೇ ಕೈಚೆಲ್ಲಿ ಕುಳಿತಿರುವ ಸಿದ್ದರಾಮಯ್ಯನವರು ಹಿಂದೂ ದೇವಾಲಯಗಳ ಅರ್ಚಕರಿಂದ ವಸೂಲಿಗೆ ಇಳಿದಿರುವುದು ದುರದೃಷ್ಟಕರ. ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇನೆ ಎಂದಿದ್ದಾರೆ.

Previous articleಜಗತ್ತನ್ನು ಅರ್ಥಮಾಡಿಕೊಂಡಂತೆ ನಟಿಸಬಾರದು
Next articleಕೇಸ್‌ಗಳಿಗೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ