ಫೋನ್ ಟ್ಯಾಪ್ ಮಾಡಲು ಎಚ್‌ಡಿಕೆ, ರೇವಣ್ಣ ಭಯೋತ್ಪಾದಕರೇ?

0
6

ಬೆಂಗಳೂರು: ಫೋನ್ ಟ್ಯಾಪ್ ಮಾಡಲು ಅವರೇನು ಭಯೋತ್ಪಾದಕರೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.
ನನ್ನ ಮತ್ತು ರೇವಣ್ಣನ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಹೆಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಫೋನ್ ಟ್ಯಾಪ್ ನಂತಹ ಮುಟ್ಟಾಳತನದ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಅವರೇನು ಭಯೋತ್ಪಾದಕರೇ? ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

Previous articleಎಚ್‌ಡಿಕೆ ಫೋನ್ ಟ್ಯಾಪ್ ಮಾಡ್ತಿಲ್ಲ
Next articleಅಂಜಲಿ ಹತ್ಯೆ ಪ್ರಕರಣ: ಮತ್ತೋರ್ವ ಅಧಿಕಾರಿ ಸಸ್ಪೆಂಡ್