Home Advertisement
Home ಸಿನಿ ಮಿಲ್ಸ್ ಪ್ರೇಮ ಗೀಮ ಜಾನೆದೋ…

ಪ್ರೇಮ ಗೀಮ ಜಾನೆದೋ…

0
47

ಚಿತ್ರ: ಚೌ ಚೌ ಬಾತ್
ನಿರ್ಮಾಣ: ಹಾರಿಜಾನ್ ಮೂವೀಸ್
ನಿರ್ದೇಶನ: ಕೇಂಜ ಚೇತನ್ ಕುಮಾರ್
ತಾರಾಗಣ: ಸುಷ್ಮಿತಾ ಭಟ್, ಪ್ರಕರ್ಷ ಶಾಸ್ತ್ರಿ ಗೀತಾ ಬಂಗೇರ, ಸಾಗರ್ ಗೌಡ, ಧನುಶ್, ಸಂಕಲ್ಪ, ಅರುಣಾ ಬಾಲರಾಜ್ ಮತ್ತಿತರರು.

ರೇಟಿಂಗ್ಸ್: 3

  • ಜಿ.ಆರ್.ಬಿ
    ಕನ್ನಡಕ್ಕೆ ಹೊಸ ಜಾನರ್ ಆಗಿರುವ ಹೈಪರ್ ಲಿಂಕ್ ರೊಮ್ಯಾಾಂಟಿಕ್ ಕಾಮಿಡಿ ಡ್ರಾಮಾವಾಗಿ ಮೂಡಿಬಂದಿರುವ ಸಿನಿಮಾ ‘ಚೌ ಚೌ ಬಾತ್’. ಮೂರು ಕಥೆಗಳು ಸಿನಿಮಾದಲ್ಲಿ ಜೊತೆ ಜೊತೆಯಾಗಿ ಸಾಗಿಬರುತ್ತದೆ. ಅಂತಿಮವಾಗಿ ಈ ಮೂರು ಕಥೆಗಳು ಒಂದಾಗುತ್ತದೆ.
    ಈ ನಡುವಿನ ಹಾದಿಯಲ್ಲಿ ನಿರ್ದೇಶಕರು ಇಂದಿನ ಹರೆಯದ ಮನಸುಗಳ ತಲ್ಲಣದ ಜೊತೆಗೆ ಒಂದಷ್ಟು ಸ್ವಾರಸ್ಯಕರ, ತಮಾಷೆಯ ಅಂಶಗಳನ್ನು ತುಂಬಿ ಪ್ರೇಕ್ಷಕರಿಗೆ ಬೋರ್ ಆಗದಂತೆ ನೋಡಿಕೊಂಡಿದ್ದಾಾರೆ. ಆ ಮಟ್ಟಿಗೆ ‘ಚೌ ಚೌ ಬಾತ್’ ಮೆಚ್ಚುಗೆಗೆ ಪಾತ್ರವಾಗುವ ಸಿನಿಮಾ. ಮುಖ್ಯವಾಗಿ ನಿರ್ದೇಶಕರು ಮಾಡಿಕೊಂಡಿರುವ ಕಥೆ ಹಾಗೂ ಅದನ್ನು ನಿರೂಪಿಸಿದ ರೀತಿ ಇಷ್ಟವಾಗುತ್ತದೆ. ಇಡೀ ಸಿನಿಮಾ ಲವಲವಿಕೆಯಿಂದ ಸಾಗುವುದು ಈ ಸಿನಿಮಾದ ಪ್ಲಸ್.ಇಂದಿನ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಚಿತ್ರ ಇದಾಗಿದೆ.
    ಚಿತ್ರದಲ್ಲಿ ಸುಷ್ಮಿತಾ ಭಟ್, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಸಾಗರ್ ಗೌಡ, ಧನುಶ್, ಸಂಕಲ್ಪ, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳಿಗೆ ಹೊಂದಿಕೊಂಡಿದ್ದಾಾರೆ. ಚಿತ್ರಕ್ಕೆ ಹೇಮಂತ್ ಸಂಗೀತ, ರುದ್ರಮುನಿ ಛಾಯಾಗ್ರಹಣವಿದೆ.
Previous articleಕಣ್ಣಾಲಿ ತುಂಬಿಸುವ ಕೆರೆಬೇಟೆ
Next articleಪ್ರೀತಿ, ಗೀತಿ ಇತ್ಯಾದಿ…