ಕನ್ನಡ ಬರೋದಲ್ಲಿವಾ ಎಂದು ಪ್ರಶ್ನಿಸಿದ ಪೆರ್ರಿ
ಬೆಂಗಳೂರು: ಆರ್‌ಸಿಬಿಯ ಎಲ್ಲಿಸ್ ಪೆರ್ರಿ ಮಿಸ್ಟರ್ ನಾಗ್ಸ್‌ನನ್ನು ಕನ್ನಡ ಬರೋದಲ್ಲಿವಾ ಎಂದು ಪ್ರಶ್ನಿಸಿದ್ದಾರೆ.
ಆರ್‌ಸಿಬಿ ಇನ್ಸೈಡರ್ ಮಿಸ್ಟರ್ ನಾಗ್ಸ್ ಖ್ಯಾತಿಯ ಡ್ಯಾನಿಶ್ ಸೇಠ್ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಆಟಗಾರ್ತಿ ಆರ್‌ಸಿಬಿಯ ಮಿಂಚಿನ ಎಲ್ಲಿಸ್ ಪೆರ್ರಿಯನ್ನು ಆರ್‌ಸಿಬಿ ಇನ್ಸೈಡರ್ನಲ್ಲಿ ಸಂವಾದ ನಡೆಸಿದ್ದು ಆ ಸಂವಾದದಲ್ಲಿ ಪ್ರೇಮಲೋಕ ಚಿತ್ರದ ಚೆಲುವೆ ಒಂದು ಕೇಳತೇನಿ ಹಾಡು ಗುಣಗುಣಿಸಿದ್ದಾರೆ. ಹಲೋ ಮಾಯ್ ಲವಲಿ ಲೇಡಿ ಹೂ ಆರ್ ಯು, ಹೂ ಆರ್ ಯು, ಎಂದು ಹಾಡುವಾಗ ಎಲ್ಲಿಸ್ ಪೆರ್ರಿ ಕನ್ನಡ ಬರೋದಲ್ಲಿವಾ..? ಕನ್ನರೇಡು ಕಾಣಲವ್ವ ಎಂದು ಹಾಡುವ ಮೂಲಕ ಪ್ರಶ್ನಿಸಿ ಕಿಚಾಯಿಸಿದ್ದಾರೆ. ಅದು ಕೂಡ ತಮ್ಮದೇ ದಾಟಿಯಲ್ಲಿ ತಮಾಷೆ ಮೂಲಕ ಎಂಬುದು ವಿಶೇಷ. ಆರ್‌ಸಿಬಿ ಅಭಿಮಾನಿಗಳ ಹಾಟ್ ಫೇವರೇಟ್ ಆಟಗಾರ್ತಿ ಆಗಿರುವ ಪ್ರೇಮಲೋಕದ ಹಾಡನ್ನು ಹಾಡಿ ಅಭಿಮಾನಿಗಳ ಮನ ಕದ್ದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.