ಹುಬ್ಬಳ್ಳಿ: ಹಣ ಕೊಟ್ಟರೆ ಮತ್ತು ಇನ್‌ಸ್ಟಾಗ್ರಾಂ ಪೇಜ್ ಫಾಲೋ ಮಾಡಿದರೆ ಎಸ್‌ಎಸ್‌ಎಲ್‌ಸಿ ಪತ್ರಿಕೆ ನೀಡುವುದಾಗಿ ಫೇಕ್ ಪೋಸ್ಟ್ ಮಾಡಿದ್ದ 5 ಇನ್‌ಸ್ಟಾಗ್ರಾಂ ಪೇಜ್‌ಗಳ ವಿರುದ್ಧ ಇಲ್ಲಿಯ ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಸ್ವಯಂ(ಸುಮೊಟೊ) ಪ್ರಕರಣ ದಾಖಲಾಗಿದೆ.
ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಕೌಂಟ್ ಕ್ರಿಯೆಟ್ ಮಾಡಿ, ಅದರಲ್ಲಿ ಪ್ರಶ್ನೆಪತ್ರಿಕೆಗೆ ಹಣಕ್ಕೆ ಬೇಡಿಕೆ ಇಡುವುದು ಬೆಳಕಿಗೆ ಬಂದಿದೆ. 15, 20 ಸಾವಿರ ನೀಡಿದರೆ ನೇರವಾಗಿ ಪ್ರಶ್ನೆಪತ್ರಿಕೆ ಹಾಕುವುದಾಗಿ ಪೇಜ್‌ನಲ್ಲಿ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಈ ತರ ಪೇಜ್ ಕ್ರಿಯೇಟ್ ಮಾಡಿದ ಮೂಲಗಳನ್ನು ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದಾರೆ.
ಈ ಕುರಿತು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮಾತನಾಡಿ, ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ವಿದಾರ್ಥಿಗಳು ಹಾಗೂ ಪಾಲಕರು ಇಂಥ ಪೇಜ್‌ಗಳ ಪೋಸ್ಟ್‌ಗಳನ್ನು ನಂಬಬಾರದು. ಎಸ್‌ಎಸ್‌ಎಲ್‌ಸಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಮುಖ ಘಟ್ಟವಾಗಿದೆ. ಹೀಗಾಗಿ ಯಾರೂ ಆಮಿಷಕ್ಕೆ ಒಳಗಾಗಬಾರದು ಮನವಿ ಮಾಡಿದ್ದಾರೆ.