ಬಾಗಲಕೋಟೆ: ಪೊಲೀಸ್ ಕ್ವಾಟರ‍್ಸ್ನಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮುಖ್ಯ ಪೇದೆಯೊಬ್ಬರಿಗೆ ಸುಟ್ಟ ಗಾಯವಾಗಿದ ಘಟನೆ ಇಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿ ನಡೆದಿದೆ. ಮನೆಯ ಹೊರವಲಯದಲ್ಲಿ ಸಿಲಿಂಡರ್ ಇರಿಸಲಾದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ.
ಸ್ಪೋಟಗೊಂಡಿದ್ದು ಹೇಗೆ
ಬನಹಟ್ಟಿ ಪೊಲೀಸ್ ಠಾಣೆಯ ಕ್ವಾಟರ‍್ಸ್ನ ಎರಡನೇಯ ಮಹಡಿಯ ಮನೆ ನಂ.9 ರಲ್ಲಿ ಬಿಸಿ ನೀರಿಗಾಗಿ ಸಿಲಿಂಡರ್‌ನ್ನು ಸಣ್ಣ ಒಲೆಯನ್ನು ಉರಿಸುವ ಸಂದರ್ಭ ಕೊಂಚ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನಂದಿಸಲು ಯತ್ನಿಸಿದ ಮನೆಯವರಾದ ಎಸ್.ಆರ್. ದಳವಾಯಿ ಪ್ರಯತ್ನಿಸುತ್ತಿದ್ದಂತೆ ತನ್ನ ಬೆಂಕಿಯ ಕೆಣ್ಣಾಲಿಗೆ ಹೆಚ್ಚು ಆವರಿಸಿದೆ. ಇದಾದ ಐದಾರು ನಿಮಿಷಕ್ಕೆ ಸಿಲಿಂಡರ್ ಸ್ಪೋಟಗೊಂಡು ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದಷ್ಟೇ ಅಲ್ಲದೆ ಸ್ಪೋಟದ ರಭಸಕ್ಕೆ ಕಟ್ಟಡ ಒಡೆದಿದೆ. ಕೂಗಳತೆಯಲ್ಲಿಯೇ ಇದ್ದ ಅಗ್ನಿಶಾಮಕವು ಸಕಾಲಕ್ಕೆ ಆಗಮಿಸುವ ಮೂಲಕ ಬೆಂಕಿ ಕೆನ್ನಾಲಿಗೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಭಯ ಭೀತಗೊಂಡ ಕುಟುಂಬಗಳು: ಈ ಕ್ವಾಟರ‍್ಸ್ನಲ್ಲಿ ಒಟ್ಟು 12 ಪೊಲೀಸ್ ಕುಟುಂಬಗಳು ವಾಸವಿದ್ದು, ಸ್ಪೋಟದ ಶಬ್ದಕ್ಕೆ ಭಯಭೀತಗೊಂಡ ಕುಟುಂಬಸ್ಥರು ಮನೆಯಿಂದ ಹೊರಗೆ ಬರುವಲ್ಲಿ ಕಾರಣವಾಯಿತು.
ಸಕಾಲಕ್ಕೆ ಅಗ್ನಿಶಾಮಕ ದಳ ಆಗಮಿಸಿದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.