ಬೆಂಗಳೂರು: ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆಯ ಜೀವ ರಕ್ಷಕ ಎಂಬುದು ಮತ್ತೊಮ್ಮೆ ಸಾಭಿತಾಗಿದೆ, ಆಟವಾಡುವಾಗ ಆಯತಪ್ಪಿ ನೀರಿನ ಸಂಪ್ಗೆ ಬಿದ್ದ ಎರಡೂವರೆ ವರ್ಷದ ಮಗುವನ್ನು ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ರಕ್ಷಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಬಿಇಎಲ್ ಲೇ ಔಟ್ನ ಮನೆಯೊಂದರಲ್ಲಿ ಆಟವಾಡುವಾಗ ಆಯತಪ್ಪಿ ಎರಡೂವರೆ ವರ್ಷದ ಮಗು 10 ಅಡಿಯ ನೀರಿನ ಸಂಪ್ಗೆ ಬಿದ್ದಿದೆ. ಭಯದಿಂದ ಚೀರಾಡಿದೆ. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ಚೀರಾಟದ ಶಬ್ದ ಗ್ರಹಿಸಿ ಸಂಪ್ ಬಳಿ ಬಂದಿದ್ದಾರೆ. ಮಗು ಬಿದ್ದಿರುವುದನ್ನು ಕಂಡು ಕೂಡಲೇ ಸಮವಸ್ತ್ರದಲ್ಲೇ ನೀರಿನ ಸಂಪ್ಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ದೇವರಂತೆ ಬಂದು ಮಗುವಿನ ಜೀವ ಉಳಿಸಿದಕ್ಕೆ ಮಗುವಿನ ಪೋಷಕರು ಪಿಎಸ್ಐ ನಾಗರಾಜ್ಗೆ ಧನ್ಯವಾದ ಅರ್ಪಿಸಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ಹಾಗೂ ಸಿಬ್ಬಂದಿಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.