Home ತಾಜಾ ಸುದ್ದಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ: 9.4 ಕೋಟಿ ರೈತರಿಗೆ ಸಂಜೀವಿನಿ

ಪಿಎಂ ಕಿಸಾನ್ ಸಮ್ಮಾನ್ ಯೋಜನೆ: 9.4 ಕೋಟಿ ರೈತರಿಗೆ ಸಂಜೀವಿನಿ

0
77

ಧಾರವಾಡ ಲೋಕಸಭಾ ಕ್ಷೇತ್ರದ 1.15 ಲಕ್ಷ ರೈತರಿಗೆ ಈವರೆಗೆ ರೂ. 23.09 ಕೋಟಿ ಜಮಾವಣೆ

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ ವರ್ಷಕ್ಕೆ ರೂ. 6000 ನೇರ ಧನಸಹಾಯ ನೀಡುವ ಮೂಲಕ 9.4 ಕೋಟಿ ರೈತರಿಗೆ ಸಂಜೀವಿನಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಯೋಜನೆಯಿಂದಾಗಿ ಕೃಷಿಗೆ ಉತ್ತೇಜನ ದೊರಕಿದೆ, ರೈತರ ಸಾಲ ಕಮ್ಮಿಯಾಗಿಸಿ, ಗ್ರಾಮೀಣ ಸಮುದಾಯಗಳನ್ನು ಸಶಕ್ತರನ್ನಾಗಿಸಿದೆ. ಇದು ಭಾರತವನ್ನು ಸ್ವಾವಲಂಬಿ ಮಾಡುವುದರೆಡೆಗೆ ಒಂದು ಮಹತ್ತರವಾದ ಹೆಜ್ಜೆಯಾದ ಈ ಯೋಜನೆಯು ನಮ್ಮ ಧಾರವಾಡ ಲೋಕಸಭಾ ಕ್ಷೇತ್ರದ 1.15 ಲಕ್ಷ ರೈತರಿಗೆ ಈವರೆಗೆ ರೂ. 23.09 ಕೋಟಿ ಜಮಾವಣೆ ಮಾಡುವುದರ ಮೂಲಕ ನಮ್ಮ ಕ್ಷೇತ್ರದ ರೈತರ ಪಾಲಿಗೆ ಆಶಾಕಿರಣವಾಗಿದೆ ಎಂದಿದ್ದಾರೆ.