ನವದೆಹಲಿ: ರೈಲ್ವೆ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಮಂಗಲ ಸೂತ್ರ, ಬಳೆಗಳು ಮತ್ತು ತಿಲಕ್ ಅಥವಾ ಬಿಂದಿಯಂತಹ ಇತರ ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕುವ ಅಗತ್ಯವಿಲ್ಲ ಎಂದು ರೈಲ್ವೆ ಮಂಡಳಿ ನಿರ್ದೇಶಕ ರಾಜೀವ್ ಗಾಂಧಿ ತಿಳಿಸಿದ್ದಾರೆ.
ಈ ಕುರಿತಂತೆ ರೈಲ್ವೆ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು RRB ಗಳು ನಡೆಸುವ ಪರೀಕ್ಷೆಗಳು ಕೆಲವು ನಿಬಂಧನೆಗಳನ್ನು ಹೊಂದಿದ್ದು, ಪರೀಕ್ಷಾ ಕೇಂದ್ರಗಳಿಗೆ ಕೆಲವು ವಸ್ತುಗಳನ್ನು ಕೊಂಡೊಯ್ಯಲು ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಆದಾಗ್ಯೂ, ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ, ಸಕ್ಷಮ ಪ್ರಾಧಿಕಾರವು ಈ ಮೂಲಕ ಕರೆ ಪತ್ರದಲ್ಲಿರುವ ಸೂಚನೆಗಳ ಪ್ಯಾರಾ 7 ಅನ್ನು ಮಾರ್ಪಡಿಸಿ ಪ್ರಕಟಣೆ ಹೊರಡಿಸಿದ್ದು, ಪರೀಕ್ಷಾ ನಿರ್ವಾಹಕ ಅಧಿಕಾರಿಗಳ ಪಾಲನೆಗಾಗಿ ಪ್ಯಾರಾವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಎಂದು ಆದೇಶಿಸಿದೆ.