Home Advertisement
Home ಅಪರಾಧ ಪರಾರಿಗೆ ಯತ್ನ: ಕೊಲೆಗಾರನ ಕಾಲಿಗೆ ಗುಂಡು

ಪರಾರಿಗೆ ಯತ್ನ: ಕೊಲೆಗಾರನ ಕಾಲಿಗೆ ಗುಂಡು

0
156
ಗುಂಡಿನ ದಾಳಿ

ಹೊಸಪೇಟೆ: ನಗರದಲ್ಲಿ ಬೆಳ್ಳಂ ಬೆಳಗ್ಗೆ ಕೊಲೆ ಆರೋಪಿ ಹುಚ್ಚ ಕಾಳಿ ಮೇಲೆ ಗುಂಡಿನ ದಾಳಿಯನ್ನು ಪೊಲೀಸರು ನಡೆಸಿದ್ದಾರೆ.
ಬುಧವಾರ ರಾತ್ರಿ ನಡೆದ ಕೊಲೆ ಪ್ರಕರಣದ ಆರೋಪಿ ಹುಚ್ಚ ಕಾಳಿ ಕೊಲೆಗೆ ಬಳಸಿದ ಚಾಕು ರಿಕವರಿ ಮಾಡುವ ವೇಳೆ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದನು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪಿಐ ಹಾಗೂ ತನಿಖಾಧಿಕಾರಿ ಹುಲುಗಪ್ಪ ಫೈರಿಂಗ್ ನಡೆಸಿದ್ದಾರೆ.
ಹೊಸಪೇಟೆ ಹೊರವಲದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹೆಚ್.ಸಿ. ಲಿಂಗರಾಜ್ ಮತ್ತು ಪಿಸಿ ಕೊಟ್ರೇಶ್ ಮೇಲೆ ದಾಳಿಗೆ ಯತ್ನಿಸಿದಾಗ ಪಿಐ ಹುಲುಗಪ್ಪ ಫೈರಿಂಗ್ ನಡೆಸಿದ್ದಾರೆ. ಹೊಸಪೇಟೆಯ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರ 4 ನೇ ಕ್ರಾಸ್‌ ಬಳಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಹೊನ್ನೂರ ಸ್ವಾಮಿ ಎಂಬವನನ್ನು ಆರೋಪಿ ಹುಚ್ಚು ಕಾಳಿ ಬುಧವಾರ ರಾತ್ರಿ ಕೊಲೆ ಮಾಡಿದ್ದನು. ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊಲೆ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಸ್ಪಿ ಡಾ. ಶ್ರೀಹರಿಬಾಬು ಬಿಎಲ್, ಎಎಸ್ಪಿ ಸಲೀಂಪಾಷಾ ಡಿವೈಎಸ್ಪಿ ಡಾ ಮಂಜುನಾಥ್ ತಳವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous articleಮೇ.15ರಿಂದ ರಾಜ್ಯಾದ್ಯಂತ ಮಹಾಸಂಘರ್ಷ ಯಾತ್ರೆ
Next articleಐಪಿಎಲ್ ಬೆಟ್ಟಿಂಗ್: ಓರ್ವನ ಬಂಧನ