ರಾಮದುರ್ಗ: ಪತ್ನಿ ಶೀಲ ಶಂಕಿಸಿದ ಪತಿರಾಯ ತನ್ನ ಪತ್ನಿಯನ್ನೇ ಕೊಡಲಿಯಿಂದ ಹಲ್ಲೆ ಮಾಡಿ ಕೊಲೆಗೈದ ಘಟನೆ ತಾಲೂಕಿನ ರಂಕಲಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದಿದೆ.
ರಂಕಲಕೊಪ್ಪ ಗ್ರಾಮದ ಗೀತಾ ಅಪ್ಪಣ್ಣ ಮಾದರ(೩೦) ಕೊಲೆಯಾದ ದುರ್ದೈವಿ. ಹತ್ಯೆ ಮಾಡಿದ ಪತಿ ಅಪ್ಪಣ್ಣ ಚೆನ್ನಪ್ಪ ಮಾದರ ತನ್ನ ಪತ್ನಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕೊಡಲಿಯಿಂದ ಬಲ ಕೆನ್ನೆ, ಕಿವಿ ಮತ್ತು ಕಾಲಿಗೆ ಬಲವಾಗಿ ಹಲ್ಲೆ ನಡೆಸಿದರ ಪರಿಣಾಮ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.
ಘಟನೆ ತಿಳಿದ ರಾಮದುರ್ಗ ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಪಿಎಸ್‌ಐ ಸುನೀಲಕುಮಾರ ನಾಯಕ ಸ್ಥಳ ಪರಿಶೀಲನೆ ನಡೆಸಿ, ಪತಿ ಅಪ್ಪಣ್ಣ ಮಾದರ ಅವನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.