ಬೆಳಗಾವಿ: ಪತಿಯ ಮನೆಯವರ ಕಿರುಕುಳದಿಂದ ಮನನೊಂದ ವಿವಾಹಿತಳೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಂಬ್ರಾ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮೃತಳನ್ನು ಸವಿತಾ ಮಾರುತಿ ಜೋಗಾನಿ(೩೨)ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಮೃತಳ ಕುಟುಂಬಸ್ಥರು ಆಕೆಯ ಪತಿ ಶಿಕ್ಷಕ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ ಹಾಗೂ ಅವರ ಮನೆಯರ ವಿರುದ್ಧ ಆರೋಪ ಮಾಡಿದ್ದಾರೆ.
೨೦೧೮ರಲ್ಲಿ ಸವಿತಾ ಮತ್ತು ಮಾರುತಿ ಮದುವೆ ನಡೆದಿತ್ತು. ಎರಡೂ ಕುಟುಂಬಸ್ಥರು ಮುಂದೆ ನಿಂತು ಮದುವೆ ಮಾಡಿದ್ದರು. ಆದರೆ ಮದುವೆಯ ನಂತರ ಪತಿಯ ಮನೆಯವರು ಸವಿತಾಳಿಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದೆನ್ನಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅನುಮನಾಸ್ಪದ ಸಾವಿನ ಪ್ರಕರಣ ದಾಖಲು ಮಾಡಲಾಗಿದೆ.