ನೇಹಾ ಮಾದರಿಯಲ್ಲಿ ಹತ್ಯೆ ಮಾಡುವುದಾಗಿ ಬಾಲಕಿಗೆ ಬೆದರಿಕೆ

0
7

ಹುಬ್ಬಳ್ಳಿ: ನೇಹಾ ಹಿರೇಮಠ ರೀತಿಯಲ್ಲಿ ಹತ್ಯೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದ ಯುವಕನನ್ನು ಕಸಬಾಪೇಟೆ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಸ್ನೇಹ ಮಾಡಿದ್ದ ಅಬ್ಬಾಸ್, ಹೊರಗಡೆ ತಿರುಗಾಡಲು ಕರೆದುಕೊಂಡು ಹೋಗಿದ್ದಾನೆ. ಜೂ. 22ರಂದು ಶಾಲೆಯಿಂದ ಮನೆಗೆ ಬಿಡುವುದಾಗಿ ಹೇಳಿ ರೇವಡಿಹಾಳ ಸೇತುವೆ ಹತ್ತಿರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿಯ ಪಾಲಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆ. 18ರಂದು ಬಾಲಕಿ ಮನೆ ಬಳಿ ಬಂದು ಅಬ್ಬಾಸ್ ಗಲಾಟೆ ಮಾಡಿದ್ದಾನೆ. ಬಾಲಕಿಯನ್ನು ಎಳೆದಾಡಿದ್ದಾನೆ. ಅಡ್ಡಬಂದ ಪಾಲಕರಿಗೆ ಬೆದರಿಕೆ ಹಾಕಿದ್ದಾನೆ.
ಅಲ್ಲದೇ ನೇಹಾ ಮಾದರಿಯಲ್ಲಿ ಕೊಲೆ ಮಡುವುದಾಗಿ ಹೆದರಿಸಿದ್ದಾನೆ ಎಂದು ಪಾಲಕರು ಕಸಬಾಪೇಟೆ ಠಾಣೆಗೆ ದೂರು ನೀಡಿದ್ದಾರೆ.

Previous articleಮಹಾನಗರ ಪಾಲಿಕೆಗೆ ಮೂರು ಪ್ರಶಸ್ತಿ
Next articleಇಂದು ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ