ಹೆಬ್ಬಾಳಕರ್ ,ಬಸವಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮುರುಗೇಶ್ ನಿರಾಣಿ ವಾಗ್ದಾಳಿ.
ಕಲಾದಗಿ: ಪಂಚಮ ಸಾಲಿ ಸಮುದಾಯಕ್ಕೆ ಮೀಸಲಾತಿಯ ನ್ಯಾಯ ಕೊಡಿಸುವಲ್ಲಿ ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಹಿಂದಿನ ಬಿಜೆಪಿ ಸರ್ಕಾರ. ಅಂದು ಸಮಾಜದ ಮೀಸಲಾತಿಗೆ ಹೊರಾಟದ ನಾಟಕ ಆಡಿದ ಲಕ್ಷ್ಮೀ ಅಕ್ಕ ಹೆಬ್ಬಾಳ್ಕರ ಇಂದು ತಮ್ಮದೇ ಸರ್ಕಾವಿದ್ದರೂ ಸುಮ್ಮನಿದ್ದಾರೆ. ಜಯ ಮೃತ್ಯುಂಜಯ ಸ್ವಾಮಿಗಳು ಕಾಂಗ್ರೇಸ್ ಏಜೆಂಟರಂತೆ ಮೌನವಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮುರುಗೇಶ ಆರ್ ನಿರಾಣಿ ಹರಿಹಾಯ್ದಿದ್ದಾರೆ.
ಕಲಾದಗಿಯಲ್ಲಿ ಗುರುವಾರ ಮಧ್ಯಾಹ್ನ ‘ಪತ್ರಿಕೆ’ಯೊಂದಿಗೆ ಮಾತನಾಡಿದ ಅವರು ಜಾತಿ ಖಾಲಂನಲ್ಲಿ ಪಂಚಮಸಾಲಿ ಬಿಟ್ಟು ಹೋಗಿತ್ತು. ಅದನ್ನು ಸೇರಿಸಿದ್ದು ,೨ ಡಿ ಕೊಟ್ಟಿದ್ದು ಬಿಜೆಪಿ. ಆದರೆ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಸ್ವಾಮೀಜಿ ನಮ್ಮ ಸರಕಾರವಿದ್ದಾಗ ಎಷ್ಟು ಪ್ರತಿಭಟನೆ ಮಾಡಿದರು. ಮೃಂತ್ಯುಜಯ ಸ್ವಾಮೀಜಿಗಳ ಸಮ್ಮಖದಲ್ಲಿ ಲಕ್ಷ್ಮಿ ಅಕ್ಕ ಅಣ್ಣ ನಮಗೆ ೨ ಡಿ ಒಪ್ಪಿಗೆ ಇಲ್ಲ ನಿಮ್ಮ ಸರಕಾರದಲ್ಲಿ ೨ ಎ ಮೀಸಲಾತಿ ಕೊಟ್ಟರೆ ಬೆಳಗಾವಿ ಕುಂದಾ ಕೊಟ್ಟು ಸನ್ಮಾನ ಮಾಡ್ತಿನಿ. ನಿಮಗೆ ಆಗದೆ ಇದ್ರೆ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳೊಳಗೆ ೨ ಎ ಕೊಡ್ತೀವಿ ಎಂದಿದ್ದರು ಎಂದ ಅವರು ಮುಂದುವರೆದು ಆಗ ನನಗೆ ಒಂದು ಜೊತೆ ಬಂಗಾರದ ಬಳೆ ತೊಡಿಸಿ ಸನ್ಮಾನ ಮಾಡಬೇಕು ಎಂದು ಒಪನ್ ಚಾಲ್ಲೇಂಜ್ ಮಾಡಿದ್ರು. ಈಗ ಸರಕಾರ ಬಂದು ಆರು ತಿಂಗಳಾದರೂ ನೀವಿಬ್ಬರು ಸುಮ್ಮನಿರೋದೇಕೆ ಎಂದು ಖಾರವಾಗಿ ಪ್ರಶ್ನಿಸಿದರು. ಪಂಚಮಸಾಲಿ ಸಮಾಜದ ಬಗ್ಗೆ ಕಳಕಳಿ ಇದ್ದರೆ ರಾಜೀನಾಮೆ ಕೊಡಿ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿರುದ್ದ ಕಿಡಿಕಾರಿದ ಅವರು ಪಂಚಮಸಾಲಿಗರಿಗೆ ೨ ಎ ಮೀಸಲು ಕೊಡಿಸೋದಾಗಿ ಹೇಳಿ ಮೂಗಿಗೆ ತುಪ್ಪ ಹಚ್ಚಿ ಓಟ್ ಪಡೆದಿದ್ದೀರಿ.ನಿಮ್ಮ ಸ್ವಾರ್ಥ ರಾಜಕಾರಕ್ಕಾಗಿ ಹೋರಾಟದ ನಾಟಕ ಮಾಡಿದ್ದೀರಿ. ಇವತ್ತು ರಾಜೀನಾಮೆ ಕೊಟ್ಟು ಹೋರಾಟ ಮಾಡಿ ೨ ಎ ಮಾಡಿಸಿಕೊಡಿ. ಒಂದು ಜೊತೆ ಅಲ್ಲ ಒಂದು ಕೆಜಿ ಬಂಗಾರದ ಆಭರಣ ಮಾಡಿಸಿ. ಹತ್ತಾರು ಸಾವಿರ ಮಾಜದ ಬಾಂದವರನ್ನು ಸೇರಿಸಿ ಸನ್ಮಾನ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಸ್ವಾಮೀಜಿಗಳೇ ನೀವು ಒಂದು ಸರಕಾರ ಇದ್ದಾಗ ಒಂದು ತರಹ. ಇನ್ನೊಂದು ಸರಕಾರ ಇದ್ದಾಗ ಮತ್ತೊಂದು ತರಹ ದ್ವಂಧ್ವ ನೀತಿಮಾಡಬೇಡಿ. ನಮ್ಮ ಸರಕಾರ ಇದ್ದಾಗ ಮುತ್ತಿಗೆ ಹಾಕೋದು ಮಾಡಿದ್ರಿ. ಕಾಂಗ್ರೆಸ್ ಸರಕಾರ ಬಂದು ಒಂದು ವರ್ಷವಾದರೂ ನಿದ್ದೆ ಹತ್ತಿದವರಂತೆ ನಾಟಕ ಮಾಡುತ್ತಿದ್ದೀರಿ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ದ ಕಿಡಿ ಕಾರಿದರು.
ಲಕ್ಷ್ಮಿ ಹೆಬ್ಬಾಳಕರ್ ಪತಿ ಬಣಜಿಗ. ಹುಟ್ಟುವ ಮಗನಿಗೆ ತಂದೆ ಮನೆ ಹೆಸರು ಬರುತ್ತದೆ. ಆ ಪ್ರಕಾರ ಮೃಣಾಲ್ ಬಣಜಿಗ ಸಮುದಾಯಕ್ಕೆ ಸೇರ್ತಾರೆ ಇದು ವಾಸ್ತವ ಸತ್ಯ. ನಾನು ಸ್ವಾಮೀಜಿ ವೈರಿ ಅಲ್ಲ ಲಕ್ಷ್ಮಿ ಅಕ್ಕನ ವೈರಿಯೂ ಅಲ್ಲ. ಸುಳ್ಳು ಹೇಳಿ ಯಾಕೆ ಮೋಸ ಮಾಡ್ತಿದಿರಿ..
ನನ್ನ ಮೈಯಲ್ಲಿ ಹರಿಯೋದು ಪಂಚಮಸಾಲಿ ರಕ್ತ ಅಂತಿದಿರಿ ನಿಮ್ಮ ಮಗ ಯಾರು ಅಂತ ಹೇಳಿ ಎಂದು ಹೆಬ್ಬಾಳಕರ್ ಅವರಿಗೆ ಪ್ರಶ್ನಿಸಿದರು.
ಶೆಟ್ಟರ್ ಅವರಿಗೆ ಹೊರಗಿನವರು ಅಂತ ಹೇಳ್ತೀರಾ. ಲಕ್ಷ್ಮಿ ಅಕ್ಕಾ ನೀವು ಖಾನಾಪುರ ತಾಲ್ಲೂಕಿನ ಹಟ್ಟಿಹೊಳಿಯವರು. ನೀವು ಸ್ಪರ್ಧೆ ಮಾಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ.ನೀವೇ ಹೊರಗಿನಿಂದ ಬಂದು ಬೇರೆ ತಾಲ್ಲೂಕಲ್ಲಿ ನಿಂತಿದ್ದಿರಿ. ಅದಕ್ಕೆ ಅಕ್ಕನಿಗೆ ಹೇಳ್ತಿದ್ದೇನೆ.
ಸಿದ್ದರಾಮಯ್ಯ ಮೈಸೂರು ಬಾದಾಮಿ ನಿಂತರೂ ಅವರು ಒಳಗಿನವರಾ? ಸೋನಿಯಾ ಇಂದಿರಾ ಗಾಂಧಿ ಕರ್ನಾಟಕದಲ್ಲಿ ನಿಂತಿದ್ದರು ಅವರು ಇಲ್ಲಿಯವರಾ? ಒಂದು ಕಡೆ ಬೊಟ್ಟು ಮಾಡಿದರೆ ನಾಲ್ಕು ಬೊಟ್ಟು ನಮ್ಮ ಕಡೆ ತೋರಿಸ್ತವೆ. ನೀವೆ ಹೊರಗಿನವರು ಇದಿರಿ..ಎಂದು ಜಗದೀಶ ಶೆಟ್ಟರ್ ಹೊರಗಿನವರು ಎಂದು ಹೇಳುತ್ತಿರುವುದಕ್ಕೆ ತಿವಿದರು.