ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಒಂದು ಭಾಗ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ಪೀಣ್ಯದ ಎನ್ಟಿಟಿಎಫ್ ರಸ್ತೆ ಬಳಿಯ ಐದು ಅಂತಸ್ತಿನ ಕಟ್ಟಡದ ಸೆಂಟ್ರಿಂಗ್ ಕಾಮಗಾರಿ ನಡೆಯುವಾಗ ಏಕಾಏಕಿ ಕುಸಿದಿದೆ. ಪರಿಣಾಮ ಇಲ್ಲಿ ಕೆಲಸ ಮಾಡುತ್ತಿದ್ದ ಯಾದಗಿರಿ ಮೂಲದ ಹಿಮಾಂಶು (28) ಸ್ಥಳದಲ್ಲೇ ಮೃತಪಟ್ಟರೆ, ಮಾರ್ಗ ಮಧ್ಯೆ ಕಲಬುರಗಿ ಮೂಲದ ವಿರೇಶ್ (30) ಸಾವನ್ನಪ್ಪಿದ್ದಾನೆ. ಮತ್ತೋರ್ವ ಕಾರ್ಮಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.