ಹಾವೇರಿ: ಉಪಚುನಾವಣೆಗೆ ಶೀಘ್ರದಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದ್ದು, ಶಿಗ್ಗಾವಿಯಲ್ಲಿ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಹೈಕಮಾಂಡ್‌ಗೆ ನಮ್ಮ ಅಭಿಪ್ರಾಯ ತಿಳಿಸಿದ್ದು, ಸೋಮವಾರ ಸಂಜೆಯೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ತನ್ನ ತತ್ವ ಸಿದ್ಧಾಂತಗಳನ್ನ ಬಿಡುವುದಿಲ್ಲ. ಕಾರ್ಯಕರ್ತರ ಅಭಿಪ್ರಾಯ, ನಾಯಕರ ಶಿಫಾರಸು, ಶಾಸಕರ ಅಭಿಪ್ರಾಯ ಹೈಕಮಾಂಡ್‌ಗೆ ಕಳುಹಿಸಲಾಗಿದ್ದು, ಮುಸ್ಲಿಂ ಸಮುದಾಯದ ಇಬ್ಬರು ಆಕಾಂಕ್ಷಿಗಳ ಬಳಿ ಮಾತನಾಡಿ ಅಂತಿಮ ಮಾಡುತ್ತೇವೆ ಎಂದರು.
ಕಾಂಗ್ರೆಸ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಇಲ್ಲ. ಉಪಚುನಾವಣೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನವರ ನಾಯಕತ್ವ ಕ್ರಿಯಾಶೀಲವಾಗಿದೆ ಎಂದು ತೋರಿಸುತ್ತದೆ. ಮುಡಾ ಪ್ರಕರಣದಲ್ಲಾದ ರಾಜಕಾರಣ ಬಗ್ಗೆ ಜನರು ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.