ನಾಳೆ ಜನತಾ ದರ್ಶನ ಇಲ್ಲ

0
10

ಬೆಂಗಳೂರು: ನಾಳೆ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದಿಲ್ಲಿಯಲ್ಲಿ ಅಕ್ಟೋಬರ್‌ 9ರಂದು ನಡೆಯುತ್ತಿರುವ ಎಐಸಿಸಿ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಲು ಭಾನುವಾರ ರಾತ್ರಿ ದಿಲ್ಲಿಗೆ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದಾರೆ. ಈ ಹಿನ್ನೆಲೆ ಅಂದು ನಿಗದಿಯಾಗಿದ್ದ ಜನತಾ ದರ್ಶನವನ್ನು ಮುಂದೂಡಲಾಗಿದೆ. ಮುಂದಿನ ಜನತಾ ದರ್ಶನ ಕಾರ್ಯಕ್ರಮದ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದಿದ್ದು, ದೂರದ ಊರುಗಳಿಂದ ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಲು ಉದ್ದೇಶಿಸಿದ್ದವರು ದಯವಿಟ್ಟು ಇದನ್ನು ಗಮನಿಸಿ ಎಂದು ತಿಳಿಸಿದ್ದಾರೆ

Previous articleಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ಅವಘಡ
Next articleಐಷಾರಾಮಿ ಪಲ್ಲಕ್ಕಿ ವೈಶಿಷ್ಟ್ಯಗಳು