ನವದೆಹಲಿ: ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಮರ್ಲೇನಾ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೊದಲು ಅವರೊಬ್ಬರೇ ಪ್ರಮಾಣವಚನ ಸ್ವೀಕಾರ ಮಾಡಲು ನಿರ್ಧರಿಸಿತ್ತು. ಆದರೆ ಈ ನಿರ್ಧಾರವನ್ನು ನಂತರ ಬದಲಾಯಿಸಿದ್ದು, ಮಂತ್ರಿಮಂಡಲದ ನಾಲ್ವರು ಸಚಿವರು ಇದೇ ಸಂದರ್ಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಪಟ್ಟ ವನ್ನು ಬಿಟ್ಟುಕೊಟ್ಟಿರುವ ಕೇಜ್ರಿವಾಲ್, ಭದ್ರತೆಯನ್ನು ತ್ಯಜಿಸುತ್ತಾರೆ ಮತ್ತು ೧೫ ದಿನಗಳಲ್ಲಿ ಮುಖ್ಯಮಂತ್ರಿ ನಿವಾಸ ತೊರೆದು ಸಾಮಾನ್ಯರಂತೆ ಬದುಕಲಿದ್ದಾರೆ ಎಂದು ಆಪ್ ಹೇಳಿದೆ. ಹರಿಯಾಣ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಬೇಕಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ತಂದು ಕೊಡುವ ಹೊಣೆಗಾರಿಕೆ ಆತಿಶಿ ಮೇಲಿದೆ.