ನಾಲ್ಕು ಕೆಜಿ ಒಣ ಗಾಂಜಾ ವಶ

0
24

ಇಳಕಲ್: ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸರು ನಡೆಸಿದ ದಾಳಿಯಲ್ಲಿ ನಾಲ್ಕು ಕೆಜಿ ಒಣ ಗಾಂಜಾ ಮತ್ತು ಅದನ್ನು ಸಾಗಿಸುತ್ತಿದ್ದ ಕಂಟೇನರ್ ಲಾರಿಯನ್ನು ವಶ ಪಡಿಸಿಕೊಳ್ಳಲಾಗಿದೆ.
ಡಿಎಸ್ ಪಿ ವಿಶ್ವನಾಥರಾವ್ ಕುಲಕರ್ಣಿ ಸಿಪಿಐ ಸುನೀಲ ಸವದಿ ಪಿಎಸ್ಐ ಎಂ ಎ ಸತ್ತಿಗೌಡರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ಯ ಗುಗಲಮರಿ ಗ್ರಾಮದ ಬಳಿ ನಿರ್ಮಿಸಲಾದ ಚೆಕ್ ಪೋಸ್ಟ್ ದಲ್ಲಿ ನಡೆದ ದಾಳಿಯಲ್ಲಿ ಜಾರ್ಖಂಡ್ ರಾಜ್ಯದ ಲತಾಕಿ ಗ್ರಾಮದ ಮಹಮ್ಮದ್ ಸುಹೇಲ ಶೇಖ ೩೮ ಮತ್ತು ಖರಗದಿಯಾ ಗ್ರಾಮದ ಮಹಮ್ಮದ್ ಕಮರೆ ೨೮ ಇವರನ್ನು ಬಂಧಿಸಿ ೪೦ ಸಾವಿರ ಮೌಲ್ಯದ ಗಾಂಜಾ ಮತ್ತು ೩೦ ಲಕ್ಷ ರೂ ಮೌಲ್ಯದ ಕಂಟೇನರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

Previous articleಮಹಾರಾಷ್ಟ್ರದಲ್ಲಿ ಭೂಕಂಪ: ಬೀದರ್ ಜಿಲ್ಲೆಯಲ್ಲಿ `ಎಫೆಕ್ಟ್’
Next articleನಾಲೆಗಳಿಗೆ ನೀರು ಹರಿಸುವಂತೆ ರೈತರಿಂದ ಪ್ರತಿಭಟನೆ