ಹುಬ್ಬಳ್ಳಿ: ಮೋದಿಯವರಿಗೂ ಹೆದರುವುದಿಲ್ಲ. ಅಮಿತ್ ಶಾ ಗೂ ಹೆದರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲೊಬ್ಬ ಸಚಿವರು ಇದ್ದಾರೆ. ಇದೆ ಊರಿನವರು. ನಾನು ಅವರ ಹೆಸರು ಹೇಳಲು ಹೋಗುವುದಿಲ್ಲ. ಹಾಗಂತ ನಾನು ಅವರಿಗೆ ಹೆದರುತ್ತೇನೆ ಎಂದು ತಿಳಿಯಬೇಡಿ. ಹೆಸರು ಹೇಳುವುದಿಲ್ಲ ಅಷ್ಟೇ. ನಾನು ಯಾರಿಗೂ ಹೆದರುವುದಿಲ್ಲ. ದೇಶದ ಜನರ ಒಳಿತಿಗೆ ಏನು ಹೇಳಬೇಕೊ ಅದನ್ನು ಹೇಳುತ್ತೇನೆ. ಮೋದಿಯವರಿಗೂ ಹೆದರುವುದಿಲ್ಲ. ಅಮಿತ್ ಷಾ ಗೂ ಹೆದರುವುದಿಲ್ಲ ಎಂದರು.
ಮೋದಿ ಧಮ್ಕಿಗೆ, ಕೇಸ್‌ಗೆ ಹೆದರಬೇಡಿ
ಒಳ್ಳೆಯ ಕೆಲಸಕ್ಕೆ ಒತ್ತಡ ಹೆಚ್ಚಾದಾಗ ಮಾತ್ರ ಕೆಲಸಗಳು ಆಗುತ್ತವೆ ಎಂಬುದಕ್ಕೆ ಈಗ ಕೇಂದ್ರ ಸರ್ಕಾರವು ಜನಗಣತಿ ಮಾಡುವ ಘೋಷಣೆ ಮಾಡಿರುವುದೇ ಉದಾಹರಣೆಯಾಗಿದೆ. ಕೇಂದ್ರದ ಸುಳ್ಳು ಘೋಷಣೆ, ಜನ ವಿರೋಧಿ ಧೋರಣೆ ವಿರುದ್ಧ ಧ್ವನಿ ಎತ್ತಿದರೆ, ಪ್ರಶ್ನೆ ಮಾಡಿದರೆ ಮೋದಿಯವರು ಧಮ್ಕಿ ಹಾಕುತ್ತಾರೆ. ಇಡಿ, ಇನ್‌ಕಂ ಟ್ಯಾಕ್ಸ್, ಸಿಬಿಐ ಏಜೆನ್ಸಿಗಳ ಮೂಲಕ ಕೇಸ್ ಹಾಕಿಸುತ್ತಾರೆ. ಆದರೆ, ಇಂಥಹ ಧಮ್ಕಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆದರಬಾರದು ಎಂದು ಖರ್ಗೆ ಹೋರಾಟಗಾರರಿಗೆ ಹುರುದುಂಬಿಸಿದರು.