ನಾಡ ದೊರೆಗೆ ಊಟ ಉಣಬಡಿಸಿ ಗುರುಕುಟೀರ ಲೋಕಾರ್ಪಣೆ

0
14

ಬಾಗಲಕೋಟೆ: ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠದ ಗುರುಕುಟೀರದ ಉದ್ಘಾಟನೆಯನ್ನು ಧಾರ್ಮಿಕ ವಿಧಿ, ವಿಧಾನಗಳ ಬದಲಾಗಿ ವಿಭಿನ್ನವಾಗಿ ನೆರವೇರಿಸಲಾಯಿತು.
ಇಳಕಲ್‌ನ ಗುರುಮಹಾಂತ ಶ್ರೀಗಳ ಪಾದಪೂಜೆ ಹಾಗೂ ನಾಡದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವತಾ ಭೋವಿಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಊಟ ಉಣಬಡಿಸುವುದರ ಮೂಲಕ ಲೋಕಾರ್ಪಣೆ ಮಾಡಲಾಯಿತು. ಬೆಳಗ್ಗೆ ಇಳಕಲ್‌ನ ಗುರುಮಹಾಂತ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಆಗಮಿಸಿದ್ದರು. ಮಧ್ಯಾಹ್ನ ಮುಖ್ಯಮಂತ್ರಿಗಳಿಗೆ ಸ್ವತಾ ಶ್ರೀಗಳೇ ಮಠದಲ್ಲಿ ಊಟ ಉಣಬಡಿಸಿದ್ದು ವಿಶೇಷವಾಗಿತ್ತು.

Previous article2040ರ ಹೊತ್ತಿಗೆ ಭಾರತ ಬಾಹ್ಯಾಕಾಶದ ಚಕ್ರವರ್ತಿ
Next articleಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್