‘ನಮ್ಮ ಕಾರ್ಗೋ’ ಟ್ರಕ್‌ಗಳ ಪರಿಶೀಲನೆ

0
21

ಬೆಂಗಳೂರು: ಮೊದಲ ಹಂತದಲ್ಲಿ ಈ 20 ಟ್ರಕ್ ಗಳ ಸೇವೆ ಆರಂಭದಿಂದ ನಿಗಮಕ್ಕೆ ವರ್ಷಕ್ಕೆ ₹20 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಕೆಎಸ್‌ಆರ್‌ಟಿಸಿ ನಿಗಮದಿಂದ ನೂತನವಾಗಿ ಸೇರ್ಪಡೆಗೊಳಿಸುತ್ತಿರುವ 20 ‘ನಮ್ಮ ಕಾರ್ಗೋ’ ಪಾರ್ಸೆಲ್ ಮತ್ತು ಕೊರಿಯರ್ ಟ್ರಕ್ ಗಳನ್ನು ‌ಕೇಂದ್ರ‌‌ ಕಛೇರಿಯಲ್ಲಿ ಪರಿಶೀಲನೆ ನಡೆಸಿ ಡಿಸೆಂಬರ್ 23ರಂದು ನಡೆಯಲಿರುವ ಲೋಕಾರ್ಪಣೆ ಕಾರ್ಯಕ್ರಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆ. ಮೊದಲ ಹಂತದಲ್ಲಿ ಈ 20 ಟ್ರಕ್ ಗಳ ಸೇವೆ ಆರಂಭದಿಂದ ನಿಗಮಕ್ಕೆ ವರ್ಷಕ್ಕೆ ₹20 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ‌ ನಿರ್ದೇಶಕ ಅನ್ಬುಕುಮಾರ್, ಮಾಜಿ ಮಹಾಪೌರ ಮಂಜುನಾಥ ರೆಡ್ಡಿ, ಕೃಷ್ಣಂ ರಾಜು, ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ಬರೆದುಕೊಂಡಿದ್ದಾರೆ.

Previous articleಸುರಕ್ಷಿತವಾಗಿರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ
Next articleಹುಟ್ಟೂರಿನ ಶಾಲೆ ದತ್ತು ಪಡೆದ ರಿಷಭ್ ಶೆಟ್ಟಿ