ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತಾಡುವಂತಿಲ್ಲ
ಬೆಂಗಳೂರು: ದೂರು ದುಮ್ಮಾನಗಳನ್ನು ಪಕ್ಷದ ನಾಲ್ಕು ಗೋಡೆಗಳ ನಡುವೆ ಮಾತ್ರ ಹೇಳಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಆರ್ ಅಶೋಕ್ ಜೊತೆ ಉಸ್ತುವಾರಿ ಸುಧಾಕರ್ ರೆಡ್ಡಿ ಅವರು ಸುದೀರ್ಘ ಚರ್ಚೆ ನಡೆಸಿ ನಂತರ ಮಾತನಾಡಿದ ಅವರು ಪಕ್ಷದ ಯಾವುದೇ ಮುಖಂಡ, ಕಾರ್ಯಕರ್ತ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತಾಡುವಂತಿಲ್ಲ, ತಮ್ಮ ದೂರು ದುಮ್ಮಾನಗಳನ್ನು ಪಕ್ಷದ ನಾಲ್ಕು ಗೋಡೆಗಳ ನಡುವೆ ಮಾತ್ರ ಹೇಳಿಕೊಳ್ಳಬೇಕು ಎಂದು ಇನ್‌ಚಾರ್ಜ್ (ಉಸ್ತುವಾರಿ) ರೆಡ್ಡಿಯವರು ಎಲ್ಲರಿಗೂ ಸ್ಪಷ್ಟವಾದ ಸೂಚನೆ ನೀಡಿದ್ದಾರೆ, ಇದು ನನ್ನ ಮತ್ತು ಕೇಂದ್ರದ ವರಿಷ್ಠರ ಅನಿಸಿಕೆಯೂ ಆಗಿದೆ, ಬಿಜೆಪಿಯಲ್ಲಿ ಇಂಥ ವಿದ್ಯಮಾನ ನಡೆಯಬಾರದಿತ್ತು, ಅದರೆ ದುರದೃಷ್ಟವಶಾತ್ ನಡೆದು ಹೋಗಿದೆ, ಇನ್ನೆರಡು ವಾರಗಳ ಅವಧಿಯಲ್ಲಿ ಎಲ್ಲವೂ ಸರಿಹೋಗಲಿದೆ, ಕಾಂಗ್ರೆಸ್ ಸರ್ಕಾರ ನಿತ್ಯ ಅಕ್ರಮದಲ್ಲಿ ತೊಡಗಿದೆ. ಲೂಟಿ, ಕಮಿಷನ್, ಮೈಕ್ರೋ ಫೈನಾನ್ಸ್ ಸಾವು, ಬಾಣಂತಿಯರ ಸಾವು ಸೇರಿ ಅನೇಕ ವಿಷಯಗಳಿವೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ನಮ್ಮ ಆಂತರಿಕ ಕಿತ್ತಾಟದಿಂದ ನಮಗೆ ಸ್ವಲ್ಪ ಅಡೆತಡೆ ಆಗಿದೆ. 15-20 ದಿನಗಳಲ್ಲಿ ಗೊಂದಲಗಳಿಗೆ ತೆರೆ ಬೀಳಲಿದ್ದು, ನಾರ್ಮಲ್ ಬಿಜೆಪಿ ರೀತಿ ಕೆಲಸ ಮುಂದುವರೆಸುತ್ತೇವೆ ಎಂದಿದ್ದಾರೆ.