ದಾಖಲೆ ಇಲ್ಲದ ₹ 2,74,000 ನಗದು ವಶಕ್ಕೆ

0
14

ಬಾಗಲಕೋಟೆ(ಕುಳಗೇರಿ ಕ್ರಾಸ್): ಲೋಕಸಭಾ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ಥಾಪಿಸಲಾದ ಚಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಒಟ್ಟು ೨,೭೪,೦೦೦ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾದಾಮಿ ಪಿಎಸ್‌ಐ ವಿಠಲ್ ನಾಯಕ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಕುಳಗೇರಿ ಕ್ರಾಸ್ ಚಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದ ವೇಳೆ ರಾಮದುರ್ಗ ಕಡೆಯಿಂದ ಬರುತ್ತಿದ್ದ ಮಹಿಂದ್ರಾ ಪಿಕಪ್ ವಾಹನದಲ್ಲಿ ಸರಿಯಾದ ದಾಖಲೆ ಇಲ್ಲದ ೨,೭೪,೦೦೦ ರೂ. ಹಣ ಪತ್ತೆಯಾಗಿದ್ದು. ಸರಿಯಾದ ದಾಖಲೆ ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದ್ದು ಸಂಬಂಧಿಸಿದ ಚುನಾವಣಾ ಸೀಜರ್ ಕಮಿಟಿಯವರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

Previous articleಸನಾತನ ಗುರು ಪರಂಪರೆಗೆ ಗೌರವಿಸುವುದು ಕರ್ತವ್ಯವಾಗಲಿ
Next article೪೦ ನಾಯಕರ ಕಾಂಗ್ರೆಸ್ ರಾಜ್ಯ ತಾರಾ ಪ್ರಚಾರಕರ ಪಟ್ಟಿ ಪ್ರಕಟ