ತುಮಕೂರು-ಯಶವಂತಪುರ ಮೆಮು ರೈಲಿಗೆ ಚಾಲನೆ

0
13

ತುಮಕೂರು: ತುಮಕೂರು-ಯಶಂತಪುರದ ನಡುವಿನ ನೂತನ ಮೆಮು ರೈಲೆಗೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಸೇವೆಗೆ ರೈಲ್ವೆ ಸಚಿವ ವಿ. ಸೋಮಣ್ಣ ಚಾಲನೆ ನೀಡಿದರು.
ಮೆಮು ರೈಲಿಗೆ ಹಸಿರು ನಿಶಾನೆ ತೋರಲಾಯಿತು. ಮೆಮು ರೈಲು ಭಾನುವಾರ ಹೊರತುಪಡಿಸಿ ಆರು ದಿನವೂ ಸಂಚರಿಸಲಿದೆ. ತುಮಕೂರು ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.ಮತ್ತೆ ಈ ರೈಲು ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು 7.15ಕ್ಕೆ ತುಮಕೂರು ತಲುಪಲಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸೋಮಣ್ಣ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ, ಸುರೇಶ್‌ ಗೌಡ, ಮಾಜಿ ಸಂಸದ ಜಿ.ಎಸ್‌‍. ಬಸವರಾಜ್‌ ಸೇರಿದಂತೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Previous articleಬೈಕ್ ಕಳ್ಳತನ ಪ್ರಕರಣ: ೬ ಲಕ್ಷ ಮೌಲ್ಯದ ೧೨ ಬೈಕ್ ವಶ
Next articleಬ್ಯಾಂಕ್ ನೋಟಿಸಗೆ ಹೆದರಿ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ