ತಜ್ಞರ ಅಭಿಪ್ರಾಯ ಪಡೆದು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ

0
17

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಕೊಡಲು ರಾಜ್ಯಪಾಲರು ಸಮಯಾವಕಾಶ, ತಜ್ಞರ ಸಲಹೆ ಪಡೆದು ಸಮಗ್ರ ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಈ ಕ್ರಮ ಸರಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಈ ಕ್ರಮ ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿ ಶುದ್ದತೆ ಕಾಪಾಡಿಕೊಳ್ಳುವುದಕ್ಕೆ ಬಹುದೊಡ್ಡ ಹೆಜ್ಜೆಯಾಗಿದೆ. ಯಾರೇ ಇದ್ದರೂ ಸಹ ಉನ್ನತಸ್ಥಾನದಲ್ಲಿದವರ ಮೇಲೆ ಆರೋಪ ಬಂದಾಗ ತನಿಖೆ ಹಾಗೂ ಕ್ರಮಗಳಾಗಬೇಕು. ಸಾರ್ವಜನಿಕ ಜೀವನದಲ್ಲಿದವರು ಭ್ರಷ್ಟಾಚಾರ ಅಥವಾ ತಪ್ಪು ಮಾಡಿಬೇಕಾದರೇ ಭಯ ಇರಬೇಕು. ರಾಜ್ಯಪಾಲರು ಅಳೆದು ತೂಗಿ ಹೀಗಾಗಿ ಪ್ರಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ತನಿಖೆಗೆ ಸಂಪೂರ್ಣ ಸಹಕಾರ ಕೊಡುತ್ತಾರೆಂದು ಭಾವಿಸಿದ್ದೇನೆ. ಯಾಕೆಂದರೆ ಸಿದ್ದರಾಮಯ್ಯ ತಾನು ಸ್ವಚ್ಛ ಹಾಗೂ ತೆರೆದ ಪುಸ್ತಕದಂತಿದ್ದೇನೆ ಎಂದು ಹೇಳುತ್ತಿದ್ದಾರೆ. ಅವರು ತಪ್ಪು ಮಾಡಿಲ್ಲ ಎಂದರೆ ಏನೂ ಭಯಪಡುವ ಅವಶ್ಯಕತೆ ಇಲ್ಲ. ತನಿಖೆಗೆ ಅಡೆತಡೆ ಮಾಡದೇ ಸಹಕಾರ ನೀಡಬೇಕೆಂದರು

Previous articleರಾಜ್ಯಪಾಲರದು ರಾಜಕೀಯ ಪ್ರೇರಿತ ನಿರ್ಧಾರ
Next articleಶೃಂಗೇರಿ ವಿಧಾನಸಭಾ ವ್ಯಾಪ್ತಿಯ ಮೂರು ತಾಲ್ಲೂಕುಗಳು ಬಂದ್