ತಂದೆ ಕೊಲೆ ಮಾಡಿದ ಮಗ, ಸೊಸೆ ಬಂಧನ

0
31

ಹುಬ್ಬಳ್ಳಿ: ತಂದೆಯನ್ನು ಕೊಲೆ ಮಾಡಿ‌ ಪರಾರಿಯಾಗಿದ್ದ ಮಗ ಮತ್ತು ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.
ಹಳೇಹುಬ್ಬಳ್ಳಿ ಸಂತೋಷನಗರದ ಅಣ್ಣಪ್ಪ ಮೈಸೂರು ಹಾಗೂ ಈತನ ಪತ್ನಿ ಲಕ್ಷ್ಮೀ ಮೈಸೂರು ಎಂಬುವರನ್ನು ಬಂಧಿಸಲಾಗಿದೆ. ಇತ್ತೀಚಿಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೋಷ್ ನಗರದಲ್ಲಿ ತಂದೆ ಮತ್ತು ಮಗನ ನಡುವೆ ದುಡಿಯುವ ವಿಷಯದ ಕುರಿತು ಜಗಳವಾಗಿತ್ತು. ಇದೆ ವಿಷಯಕ್ಕಾಗಿ ಮಗನು ತಂದೆಯ ಮೇಲೆ ಹಲ್ಲೆ ಮಾಡಿದ್ದು ತಂದೆಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಅಣ್ಣಪ್ಪ ಮತ್ತು ಆತನ ಪತ್ನಿ ಲಕ್ಷ್ಮೀ ಎಂಬ ಇಬ್ಬರೂ ಪರಾರಿಯಾಗಿದ್ದರು. ಈ ಘಟನೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಐ ನೇತೃತ್ವದ ತಂಡವನ್ನು ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Previous articleಜನರ ಗಮನ ಬೇರೆಡೆ ಸೆಳೆಯಲು ನಬಾರ್ಡ್ ಆರೋಪ
Next articleಗರ್ಭಿಣಿಯರ ಸಾವು ಪ್ರಕರಣ : ಸಂಜೆ ಸಿಎಂ ನೇತೃತ್ವದಲ್ಲಿ ಸಭೆ