ಡಿಪೋದಲ್ಲೇ ಕೆಎಸ್‌ಆರ್‌ಟಿಸಿ ಚಾಲಕ ವಿಷ ಸೇವನೆ

ಕಡೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಡೂರು ವಿಭಾಗದ ಚಾಲಕ ಮಧು (41) ಅವರು ಘಟಕದಲ್ಲೇ ವಿಷ ಸೇವನೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಕಡೂರು ಘಟಕದ ಬಸ್ ಚಾಲಕ ಮಧು ಅವರು ೧೭ರ ಗುರುವಾರ ಕರ್ತವ್ಯಕ್ಕೆ ಹಾಜರಾಗದೆ ಕಚೇರಿಯ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿರುವುದನ್ನು ಕಂಡ ಡೆಪ್ಯೂಟಿ ಸೂಪರಿಂಟೆಡ್ ಪುಟ್ಟ ಸ್ವಾಮಿ ಅವರು ಗುರುವಾರ ಗೈರುಹಾಜರಿ ಹಾಕಿರುವ ವಿಷಯಕ್ಕೆ ವಾಗ್ವಾದ ನಡೆಸಿದ ಮಧು ಘಟಕದ ವಿಶ್ರಾಂತಿ ಗೃಹದಲ್ಲಿ ವಿಷ ಸೇವನೆ ಮಾಡಿರುವುದಾಗಿ ಘಟಕದ ಮ್ಯಾನೇಜರ್ ಅರುಣ ಕುಮಾರಿ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಸಮಯದಲ್ಲಿ ತಾವು ಕಾರ್ಯ ನಿಮಿತ್ತ ಅಜ್ಜಂಪುರಕ್ಕೆ ತರಳಿದ್ದಾಗಿ ಹೇಳಿದ ಅವರು ಮಧು ಅವರನ್ನು ತಕ್ಷಣ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ, ಮಧು ಚಿಕಿತ್ಸೆಯಿಂದ ಚೇತರಿಸಿಕೊಂಡಿರುವುದಾಗಿ ಮಾಹಿತಿ ನೀಡಿದರು.