ಡಿಜಿಟಲ್ ಯುಗದಲ್ಲಿಯೂ ಜನರ ಪರದಾಟ: ಕರ್ನಾಟಕದ ಪಾಲಿಗೆ ದೊಡ್ಡ ಕಂಟಕ

0
23

ಡಿಜಿಟಲ್ ಯುಗದಲ್ಲಿಯೂ ಜನರ ಪರದಾಟ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ

ಬೆಂಗಳೂರು: ರಾಜ್ಯದ ಆದಾಯ ಹೆಚ್ಚಳವಾಗುವ ಬಗ್ಗೆ ಸರಕಾರ ಗಮನಹರಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದಲ್ಲಿನ ಆಡಳಿತದ ವ್ಯವಸ್ಥೆ ಕ್ಷೀಣಿಸುತ್ತಿರುವುದು ಕರ್ನಾಟಕದ ಪಾಲಿಗೆ ದೊಡ್ಡ ಕಂಟಕ. ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಬೆಲೆ ಏರಿಕೆಯ ಬಿಗ್ ಶಾಕ್ ನೀಡಿದ್ದು ಆಯ್ತು. ಅದರಲ್ಲೂ ಮುದ್ರಾಂಕ ಶುಲ್ಕ ಗಗನಕ್ಕೆರಿಸಲಾಯಿತು. ಇದೀಗ ರಾಜ್ಯದಲ್ಲಿ ಆಸ್ತಿ ನೋಂದಣಿ ಬಹುತೇಕ ಸ್ತಬ್ಧವಾಗಿರುವುದು, ಡಿಜಿಟಲ್ ಯುಗದಲ್ಲಿಯೂ ಜನರ ಪರದಾಟ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ.

ಪ್ರತಿಬಾರಿಯೂ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ನಿಲ್ಲುವ ಕಾಂಗ್ರೆಸ್ ಪಕ್ಷ ರಾಜ್ಯದ ಅಭಿವೃದ್ದಿಯತ್ತ ನೋಡದೆ ಕೇವಲ ತನ್ನ ಆಂತರಿಕ ಆದಾಯ ಹೆಚ್ಚಳ ಮಾಡಿಕೊಳ್ಳುವತ್ತ ಗಮನ ಹರಿಸುತ್ತಿರುವುದು ದುರಂತ. ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನ ಒಳಜಗಳ, ಸಿಎಂ ಕುರ್ಚಿ ಜಗಳ, ತಮ್ಮ ವ್ಯಕ್ತಿಗತ ಮತ್ತು ಪಕ್ಷದ ಆದಾಯದ ಬಗ್ಗೆ ಗಮನ ಹರಿಸುತ್ತಿದೆ. ಇದೆಲ್ಲವನ್ನು ಬಿಟ್ಟು ರಾಜ್ಯದ ಆದಾಯ ಹೆಚ್ಚಳವಾಗುವ ಬಗ್ಗೆ ಗಮನಹರಿಸಲಿ ಎಂದಿದ್ದಾರೆ.

Previous article​ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ಪ್ರಧಾನಿ ಮೋದಿ
Next articleನೊಂದಣಿ ಬಹುತೇಕ ಸ್ತಬ್ಧ: ಗುರಿ ಮುಟ್ಟುವುದು ಅಸಾಧ್ಯ