ಟಿಂಬರ್ ವ್ಯಾಪಾರಿ ಆತ್ಮಹತ್ಯೆ

0
9

ಬಂಟ್ವಾಳ: ಟಿಂಬರ್ ವ್ಯಾಪಾರಿಯೋರ್ವರು‌ ಬಿ.ಸಿ. ರೋಡಿನ ವಸತಿ ಸಂಕೀರ್ಣವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
‌ಮೂಲತಃ ಸಜೀಪಪಡು ಗ್ರಾಮದ ದೋಟ ನಿವಾಸಿಯಾಗಿರುವ ಭಕ್ತ ಕುಮಾರ್ ಶೆಟ್ಟಿ(64) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಬಿ.ಸಿ.ರೋಡಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಇವರು ರಾತ್ರಿ ವೇಳೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಹೇಳಲಾಗಿದೆ. ಅವಿವಾಹಿತನಾಗಿರುವ ಇವರು ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿಯೇ ವಾಸವಿದ್ದರು.
ಮರದ ವ್ಯಾಪಾರ ನಡೆಸುತ್ತಿದ್ದ ಇವರು ಇತ್ತೀಚಿಗೆ ಆರೋಗ್ಯ ಸಮಸ್ಯೆಯಿಂದ ಬಳತ್ತಿದ್ದರೆನ್ನಲಾಗಿದೆ. ಇದರಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.
ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleಅಪ್ರಾಪ್ತ ಮಗಳನ್ನೇ ಗರ್ಭಿಣಿಯಾಗಿಸಿದ ತಂದೆ: ಪೋಕ್ಸೊ ಪ್ರಕರಣ ದಾಖಲು
Next articleಮಹಾನಗರ ಪಾಲಿಕೆಗೆ ಮೂರು ಪ್ರಶಸ್ತಿ