ಜ್ಯೂಸ್ ನೀಡಿಲ್ಲ ಎಂದು ಹಲ್ಲೆ

0
17

ಶಿರಸಿ: ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರಿಗೆ ಜ್ಯೂಸ್ ಮಾರಾಟ ಮಾಡುತ್ತಿದ್ದವನು ತನಗೆ ಜ್ಯೂಸ್ ನೀಡಲಿಲ್ಲ ಎಂದು ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಮಂಗಳವಾರ ನಡೆದಿದೆ.
ಆರೋಪಿತನಾದ ಸ್ಥಳೀಯ ಇಂದಿರಾ ನಗರದ ನಿಜಾಯ ಮಹಮ್ಮದ ಜಾಫರ ಸಾಬ(೨೨), ತಾನು ಕರೆದರೂ ಜ್ಯೂಸ್ ನೀಡದೇ ಮುಂದಕ್ಕೆ ಹೋದನೆಂದು ಜ್ಯೂಸ್ ಮಾರಾಟಗಾರ ಹುಸೇನಸಾಬ ಹಸನಸಾಬ ಪಟ್ಟೇಗಾರ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಒಡ್ಡಿದ್ದಾನೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

Previous articleಮತ್ತೆ ಮೋದಿಯವರೇ ಪ್ರಧಾನಿ
Next articleಅನಾರೋಗ್ಯದಿಂದ ಮತದಾನಕ್ಕೆ ತೆರಳಿಲ್ಲ