ಜೆಬಿಎಸ್‌ಗೆ ಮೊದಲ ಬಲಿ

0
32

ಚಿಕ್ಕೋಡಿ: ದೇಶದಲ್ಲಿ ಕಾಡುತ್ತಿರುವ ಜೆಬಿಎಸ್ ಕಾಯಿಲೆಗೆ ರಾಜ್ಯದಲ್ಲಿ ಮೊದಲ ವ್ಯಕ್ತಿ ಬಲಿಯಾಗಿದ್ದಾನೆ. ಮೃತನನ್ನು ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದ ಯತಿಲ್ ಬಾಳಗೊಂಡ ಪಾಟೀಲ(೬೪) ಎಂದು ಗುರುತಿಸಲಾಗಿದೆ.
ಈ ಕಾಯಿಲೆಗೆ ದೇಶದ ೬ ರಾಜ್ಯಗಳಲ್ಲಿ ಇಲ್ಲಿವರೆಗೆ ೧೯ ಜನ ಮೃತಪಟ್ಟಿದ್ದಾರೆ. ಕೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯತಿಲ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈತ ಎಂಟು ದಿನಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ. ಜೆಬಿಎಸ್(ಗುಯಿಲಿನ್ ರ‍್ರೆ ಸಿಂಡ್ರೋಮ್) ನರ ಸಂಬಂಧಿ ಕಾಯಿಲೆಯಾಗಿದೆ.

Previous articleಸಿಎಂ ಬದಲಾವಣೆ ಚರ್ಚೆ ಅಪ್ರಸ್ತುತ
Next articleರೈತರಿಗೆ ಪರಿಹಾರ ವಿಳಂಬ: ಸಣ್ಣ ನೀರಾವರಿ ಕಚೇರಿ ವಸ್ತುಗಳ ಜಪ್ತಿ