ಜನರ ಹಿತಕ್ಕಾಗಿ ಮನೆ-ಮನೆಗೆ ಕುಡಿಯುವ ನೀರು

0
29

ಬೆಂಗಳೂರು: ನಿಪ್ಪಾಣಿ ಮತಕ್ಷೇತ್ರದ ಕೋಡ್ನಿ ಗ್ರಾಮದಲ್ಲಿ 3 ಕೋಟಿ 28 ಲಕ್ಷ ರೂ ಮೊತ್ತದಲ್ಲಿ ಜೆ.ಜೆ.ಎಮ್ ಯೋಜನೆಯಡಿ ಗ್ರಾಮದ 1103 ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ನಳಮಾಪಕ ಅಳವಡಿಸಿ ನೀರಿನ ಸೌಲಭ್ಯ ಒದಗಿಸುವ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಭೂ ಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಉತ್ತಮ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅವಶ್ಯಕವಾಗಿದ್ದು, ಹೀಗಾಗಿ ಕ್ಷೇತ್ರದ ಜನರ ಹಿತಕ್ಕಾಗಿ ಮನೆ-ಮನೆಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಿದ್ದು ಪ್ರತಿ ಮನೆಗೆ ನೀರು ಒದಗಿಸಲಾಗುವುದು ಎಂದಿದ್ದಾರೆ.

ಪೂಜಾ ಸ್ಥಳದಲ್ಲಿ ಪಕ್ಷದ ಕಾರ್ಯಕರ್ತ ಪ್ರವೀಣ ಕೀರ್ತನೆ ಅವರು ಬಿಡಿಸಿದ ಹೂವಿನ ಅಲಂಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Previous articleಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಮೋದಿ ಸಫಾರಿ
Next articleನ್ಯಾಯ ಪಡೆಯಲು ಮೊದಲು ಕಾನೂನಿನ ಬಗ್ಗೆ ಅರಿವು ಅಗತ್ಯ