ಬೆಂಗಳೂರು: ತೆರಿಗೆದಾರನ ದುಡ್ಡನ್ನು ಪೋಲು ಮಾಡುವ ಕೆಲಸವನ್ನು ಬಿಟ್ಟು ಉಪಯುಕ್ತ ಯೋಜನೆಗಳಿಗೆ, ಜನೋಪಯೋಗಿ ಕೆಲಸಗಳಿಗೆ ವಿನಿಯೋಗ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಕಾಕ್ಕೆ ಸಲಹೆ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ 180 ಮೀಟರ್ ಉದ್ದದ ಅಂಡರ್ ಪಾಸ್ ಲೈಟಿಂಗ್, ಪೇಂಟಿಂಗ್ ಗೆ ಬರೋಬ್ಬರಿ 3 ಕೋಟಿ ವೆಚ್ಚ ಮಾಡಿರುವುದು ನಿಜಕ್ಕೂ ಮೂರ್ಖತನದ ಪರಮಾವಧಿಯೇ ಸರಿ. ರಾಜ್ಯದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿರುವ ಸಂದರ್ಭದಲ್ಲಿ ಈ ರೀತಿ ದುಂದುವೆಚ್ಚ ಮಾಡುವ ಅವಶ್ಯ ವಿತ್ತೇ ? ನೀರಾವರಿ, ಶಿಕ್ಷಣ, ಮಹಿಳಾ ಸಬಲೀಕರಣ, ಕಾನೂನು ಸುವ್ಯವಸ್ಥೆ ಬಲಪಡಿಸುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕಾಗಿದ್ದ ಸರ್ಕಾರ ಕಣ್ಣಿಗೆ ಕುಕ್ಕುವ ಲೈಟಿಂಗ್ ಹಾಕುವ ಮೂಲಕ ವಾಹನ ಚಾಲಕರಿಗೂ ಅಪಾಯ ತಂದಿಡುತ್ತಿದೆ ಹಾಗೂ ಅನಾವಶ್ಯಕವಾಗಿ ಖರ್ಚು ಮಾಡುತ್ತಿದೆ.
ಜನಸಾಮನ್ಯರ ಬೇಡಿಕಳನ್ನು ಬದಿಗಿಟ್ಟು ಸರಕಾರ ಆದ್ಯತೆಗಳನ್ನು ಪಟ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ
ಬೇಡಿಕೆ:ಕೃಷ್ಣಾ ಯೋಜನೆ ಪೂರ್ಣಗೊಳಿಸಿ ಉತ್ತರ ಕರ್ನಾಟಕದ ರೈತರಿಗೆ ನೇರವಾಗಿ
ಸರ್ಕಾರದ ಆದ್ಯತೆ: ವಿಧಾನ ಸೌಧಕ್ಕೆ ಲೈಟು ಹಾಕಿಸ್ತೀವಿ
ಬೇಡಿಕೆ: ಉತ್ತರ ಕರ್ನಾಟಕದಲ್ಲಿ ಉದ್ಯೋಗ ಸೃಜನೆ ಮಾಡಿ, ಕೈಗಾರಿಕೆಗಳನ್ನು ತನ್ನಿ
ಸರ್ಕಾರದ ಆದ್ಯತೆ:ನಾವು ಸುರಂಗ ಮಾರ್ಗ ಮಾಡಿ ಅದರೊಳಗೆ ಮೆಟ್ರೋ ಓಡಿಸ್ತೀವಿ
ಬೇಡಿಕೆ: ಕುಸಿಯುತ್ತಿರುವ ಕಾನೂನು ವ್ಯವಸ್ಥೆ ಸರಿ ಮಾಡಿ
ಸರ್ಕಾರದ ಆದ್ಯತೆ:ಮಂತ್ರಿಗಳಿಗೆ ಹೊಸ ಇನ್ನೋವ ಕಾರು ಕೊಡಿಸ್ತೀವಿ
ಬೇಡಿಕೆ: ಟಿ.ಬಿ ಡ್ಯಾಮ್ ಹೂಳೆತ್ತಿ
ಸರ್ಕಾರದ ಆದ್ಯತೆ: ಇಲ್ಲ. ಸಮಾನಾಂತರ ಜಲಾಶಯ ಕಟ್ಟಿಸ್ತೀವಿ
ಬೇಡಿಕೆ:ರಸ್ತೆ ಗುಂಡಿ ಮುಚ್ಚಿ, ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಿ
ಸರ್ಕಾರದ ಆದ್ಯತೆ: ವಾಹನ ಸವಾರರು ಎಚ್ಚರಿಕೆಯಿಂದ ಓಡಾಡಬೇಕು
ಬೇಡಿಕೆ: ಹಾಲಿನ ದರ, ವಿದ್ಯುತ್ ದರ ಇಳಿಸಿ
ಸರ್ಕಾರದ ಆದ್ಯತೆ: ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಹಾಲಿನ ದರ ಕಡಿಮೆ ಇರೋದು
ಬೇಡಿಕೆ: ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಸ್ವಜನಪಕ್ಷಪಾತ, ಭ್ರಷ್ಟಾಚಾರ, ವಿಳಂಬ ಧೋರಣೆ ನಿಲ್ಲಿಸಿ
ಸರ್ಕಾರದ ಆದ್ಯತೆ: ಸದಸ್ಯರನ್ನು ಬದಲಿಸಲು ಆಗುವುದಿಲ್ಲ, ಭ್ರಷ್ಟಾಚಾರ ಆಗಿದ್ದು ಬಿಜೆಪಿ ಅವಧಿಯಲ್ಲೇ
ಅತಿ ಹೆಚ್ಚು ಬಜೆಟ್ ಕೊಟ್ಟ ಮುಖ್ಯ ಮಂತ್ರಿಗಳು, ಆರ್ಥಿಕ ಸುಧಾರಣೆಗಳ ಹರಿಕಾರರು ಆದ ಸನ್ಮಾನ್ಯ ಸಿದ್ದರಾಮಯ್ಯನವರು ಈ ರೀತಿ ಯೋಜನೆಗಳಿಗೆ ಕಡಿವಾಣ ಹಾಕುವ ಬದಲಿಗೆ ಪ್ರೋತ್ಸಾಹ ನೀಡಿ ತೆರಿಗೆದಾರನ ದುಡ್ಡನ್ನು ಪೋಲು ಮಾಡುವ ಕೆಲಸವನ್ನು ಬಿಟ್ಟು ಉಪಯುಕ್ತ ಯೋಜನೆಗಳಿಗೆ, ಜನೋಪಯೋಗಿ ಕೆಲಸಗಲಿ ವಿನಿಯೋಗ ಮಾಡಲಿ ಎಂದಿದ್ದಾರೆ.