ಚಿತ್ರರಂಗದ ವಂಶಕ್ಕೂ ಕಲಘಟಗಿ ನಂಟು

0
32

ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಯಶ್

ಬೆಂಗಳೂರು: ನಟ ಅಂಬರೀಷ್ ಯಶ್‌ಗೆ ಕೊಟ್ಟಿದ್ದ ಅಪರೂಪದ ಉಡುಗೊರೆಯಾಗಿದ್ದ ಕಲಘಟಗಿ ತೊಟ್ಟಿಲು ಈಗ ಅಭಿಷೇಕ್ ಅಂಬರೀಷ್ ಅವರ ಮನೆಯಲ್ಲೂ ಸಹ ತೂಗುತ್ತಿದೆ.
ಅಂದು ನಟ ಯಶ್ ಮಗಳಿಗೆ ರೆಬೆಲ್ ಸ್ಟಾರ್ ಅಂಬರೀಷ್ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದರು, ಅದೇ ರೀತಿಯ ತೊಟ್ಟಿಲು ಈಗ ಅಂಬಿ ಮನೆ ಸೇರಿದೆ. ಇದು ಅಂಬಿ ಆಸೆಯೂ ಸಹ ಆಗಿತ್ತು. ಮಗನಿಗೆ ಮಗುವಾದಾಗ ಕಲಘಟಗಿ ತೊಟ್ಟಿಲಲ್ಲೇ ಮಗುವನ್ನ ಮಲಗಿಸಿ ತೋಗಿಸಬೇಕೆಂದು.. ಆ ಮಾತನ್ನ ನೆನಪಿನಲ್ಲಿಟ್ಟುಕೊಂಡು.. ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.

ಇದೇ ಮಾರ್ಚ್ ೧೪ ರಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಅಂಬರೀಶ ಮೊಮ್ಮಗನಿಗಾಗಿ ವಿಶೇಷವಾದ ತೊಟ್ಟಿಲು ಸಿದ್ಧವಾಗಿತ್ತು, ಈ ಮೊದಲು ಡಾ. ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಅವರ ಮನೆಗೆ ಕಲಘಟಗಿ ತೊಟ್ಟಿಲು ಹೋಗಿತ್ತು. ಅಂದ ಹಾಗೆ ಯಶ್ ಮತ್ತು ರಾಧಿಕಾ ಅವರಿಗೆ ಜನಿಸುವ ಮಗುವಿಗಾಗಿ ನೀಡಲು ಒಂದೊಳ್ಳೊಯ ತೊಟ್ಟಿಲು ಬೇಕೆಂದು ಬೆಳಗಾವಿ ಮೂಲದ ನಾರಾಯಣ ಕಲಾಲ ಅವರಿಗೆ ಅಂಬರೀಶ್ ಅವರು ಹೇಳಿದ್ದರಂತೆ. ಅಂಬರೀಶ ಅವರ ಆಶಯದಂತೆ ನಾರಾಯಣ ಕಲಾಲ ಅವರು ಒಳ್ಳೆಯ ತೊಟ್ಟಿಲು ತಯಾರಕರನ್ನು ಹುಡುಕಾಟದಲ್ಲಿದ್ದಾಗ ಕಲಘಟಗಿಯಲ್ಲಿ ತೊಟ್ಟಿಲು ತಯಾರಿಕೆಗೆ ಪ್ರಸಿದ್ಧ ಮನೆತನವಾದ ಸಾವಕಾರ ಕುಟುಂಬದ ಬಗ್ಗೆ ತಿಳಿದು ಸಂಪರ್ಕಿಸಿ ತೊಟ್ಟಿಲು ಮಾಡಿಸಿ ಕಳಿಸಿದ್ದರು.
ಆ ತೊಟ್ಟಿಲನ್ನು ಯಶ್-ರಾಧಿಕಾ ಅವರ ಮಗಳಿಗೆ ಕಲಘಟಗಿ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈಗ ದಿ. ಅಂಬರೀಶ್ ಅವರ ಮೊಮ್ಮಗನಿಗೆ ಕಲಘಟಗಿಯಲ್ಲಿಯೇ ಅದೇ ಸಾವಕಾರ ಕುಟುಂಬದವರು ತಯಾರಿಸಿದ ತೊಟ್ಟಿಲು ಅಭಿಷೇಕ್ ಅಂಬರೀಷ್ ಮನೆ ಸೇರಿದೆ, ಕಲಘಟಗಿಯ ಕಲಾವಿದ ಕಲಾವಿದ ಶ್ರೀಧರ ಸವಕಾರ’ ಕಳೆದ ಎರಡು ತಿಂಗಳಿಂದ ತೊಟ್ಟಿಲಿನ ಕೆಲಸ ಮಾಡಿದ್ದಾರೆ. ಈ ವಿಶೇಷವಾದ ತೊಟ್ಟಿಲಿನ ಮೇಲೆ ಕೃಷ್ಣನ ಅವತಾರ, ದಶಾವತಾರದ ಚಿತ್ರಕಲೆ ಬಿಡಿಸಿಲಾಗಿದೆ.

ಕಲಘಟಗಿ ತೊಟ್ಟಿಲು ವಿಶೇಷವೇನು ಗೊತ್ತೆ? : ಅರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಿಲಿನ ಮೇಲೆ ಚಿತ್ರಗಳನ್ನು ಬರೆಯಲಾಗುತ್ತದೆ. ಅಲ್ಲದೇ, ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ, ಮಹಾಭಾರತ ಕಥೆಗಳ ಚಿತ್ರಗಳನ್ನು ಬಿಡಿಸಲಾಗುತ್ತದೆ. ತೊಟ್ಟಿಲಿನಲ್ಲಿ ಮಲಗಿದ ಮಗು ದೇವರ ಸನ್ನಿಧಾನದಲ್ಲಿ ಆಡಲಿ ಎಂಬ ಭಾವದ ಹಿನ್ನೆಲೆಯಲ್ಲಿ ಈ ಚಿತ್ರಗಳನ್ನು ಬರೆಯಲಾಗುತ್ತದೆ ಎಂದು ತೊಟ್ಟಿಲು ತಯಾರಕರಾದ ಸಾವಕಾರ ಕುಟುಂಬದವರು ಹೇಳುವ ಮಾತು.

Previous articleಡಿ.ಕೆ.ಶಿವಕುಮಾರ್ ಬಗ್ಗೆ ಅಜ್ಜಯ್ಯ ಸ್ವಾಮೀಜಿ ಸ್ಪೋಟಕ ಭವಿಷ್ಯ
Next articleಪ್ರತ್ಯೇಕಿಸಿ ಓಲೈಸುವುದು ಸಮಾಜ ಕಟ್ಟುವುದಕ್ಕೋ, ಒಡೆಯುವುದಕ್ಕೋ