ಗ್ಯಾಸ್ ಗೀಸರ್‌ ಸೋರಿಕೆ: ಯುವತಿ ಸಾವು

0
14

ಬೆಂಗಳೂರು: ಸ್ನಾನ ಮಾಡಲು ಹೋಗಿದ್ದ ಯುವತಿ ಗ್ಯಾಸ್ ಗೀಸರ್‌ ವಿಷಾನಿಲ ಸೋರಿಕೆಯಾಗಿ ಸಾವನ್ನಪ್ಪಿದ್ದಾಳೆ.
ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದ ರಾಜೇಶ್ವರಿ (23) ಎಂಬುವಳೇ ಈ ದುರ್ಘಟನೆಯಲ್ಲಿ ಮೃತಳಾದ ಯುವತಿ.
ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾದ ಹಿನ್ನೆಲೆ ಯುವತಿ ಪ್ರಜ್ಞೆತಪ್ಪಿ ಅಲ್ಲೇ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಿಸದೇ ಯುವತಿ ಕೊನೆಯುಸಿರೆಳೆದಿದ್ದಾಳೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು
Next articleಕಟ್ಟಡ ಕುಸಿದು ಕಾರ್ಮಿಕ ಸಾವು