ಗ್ಯಾಸ್ ಆಟೋದಲ್ಲಿ ದಿಢೀರ್ ಬೆಂಕಿ

ಸುಟ್ಟು ಕರಕಲಾದ ಆಟೋ

ದಾವಣಗೆರೆ: ಗ್ಯಾಸ್ ಚಾಲಿತ ಆಟೋದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ನಗರದ ದೇವರಾಜ ಅರಸು ಬಡಾವಣೆಯ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಬಳಿ ಈ ಘಟನೆ ಸಂಭವಿಸಿದೆ. ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ದಿಢೀರ್ ಕಾಣಿಸಿಕೊಂಡ ಬೆಂಕಿ ಕಾರಣಕ್ಕೆ ಅರ್ಧ ಗಂಟೆ ಕಾಲ ಸ್ಥಳದಲ್ಲಿ ಆತಂಕ ಸೃಷ್ಟಿ ಆಗಿತ್ತು. ಆಟೋ ಸುಟ್ಟು ಕರುಕಲಾಯಿತು.