ಗೋವಾದಿಂದ ಬೆಂಗಳೂರಿಗೆ ಬಸ್‌ಗಿಂತ ವಿಮಾನ ದರ ಅಗ್ಗ

0
24

ಪಣಜಿ: ಬೆಂಗಳೂರಿನಲ್ಲಿ ಸದ್ಯ ತೀವ್ರ ನೀರಿನ ಕೊರತೆ ಎದುರಾಗಿದೆ. ಈ ಮಧ್ಯೆ ಗೋವಾದಿಂದ ಬೆಂಗಳೂರಿಗೆ ಪ್ರಯಾಣಿಸಲು ವಿಮಾನಯಾನ ಸಂಸ್ಥೆಗಳು ಬಸ್‌ಗಳಿಗಿಂತ ಕಡಿಮೆ ದರದಲ್ಲಿ ಟಿಕೆಟ್ ದರ ನಿಗದಿಪಡಿಸಿರುವುದು ಚರ್ಚೆಗೆ ಕಾರಣವಾಗಿದೆ.
ಫ್ಲೆ ೯೧ ವಿಮಾನ ಸಂಸ್ಥೆ ಗೋವಾದಿಂದ ಬೆಂಗಳೂರಿಗೆ ಟಿಕೆಟ್ ದರ ೧೯೯೯ ರೂ. ನಿಗದಿಪಡಿಸಿದೆ. ಗೋವಾದಿಂದ ಬೆಂಗಳೂರಿಗೆ ತೆರಳಲು ಕರ್ನಾಟಕ ಸಾರಿಗೆ ನಿಗಮದ ಬಸ್ ಟಿಕೆಟ್ ದರ ೧,೨೫೭ ರೂ. ಮತ್ತು ಖಾಸಗಿ ಬಸ್‌ಗಳಿಗೆ ೯೯೯ ರಿಂದ ೨,೭೦೦ ರೂ. ಇದೆ. ವಿಮಾನ ಪ್ರಯಾಣ ಅಗ್ಗದ ಪರ್ಯಾಯವಾಗಿದೆ. ವಿಮಾನಗಳು ಮೋಪಾ ವಿಮಾನ ನಿಲ್ದಾಣದಿಂದ ಬೆಳಿಗ್ಗೆ ೭.೫೫ಕ್ಕೆ ಹೊರಡುತ್ತವೆ ಮತ್ತು ಬಸ್ಸುಗಳು ಸಂಜೆ ಬೆಂಗಳೂರಿಗೆ ಹೊರಡುತ್ತವೆ.
ಹೊಸದಾಗಿ ಆರಂಭಿಸಿರುವ ವಿಮಾನಯಾನ ಸಂಸ್ಥೆಯ ಜನಪ್ರಿಯತೆಗೆ ಅನುಕೂಲವಾಗಲೆಂದು ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವ ಯೋಜನೆಯನ್ನು ಪರಿಚಯಿಸಿದ್ದರೂ, ಬೆಂಗಳೂರಿನ ನೀರಿನ ಕೊರತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬೆಂಗಳೂರಿಗೆ ಹೋದಾಗ ಅಲ್ಲಿ ನೀರಿನ ಸಮಸ್ಯೆಯಾದರೆ ವಾಪಸ್ ಬರುವಾಗ ಕಡಿಮೆ ಬೆಲೆಗೆ ಟಿಕೆಟ್ ಸಿಗುತ್ತದೆಯೇ ಎಂದೆಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

Previous articleಭಕ್ತಸಾಗರದ ಮಧ್ಯೆ ಮಾರಿಕಾಂಬಾ ದೇವಿ ರಥೋತ್ಸವ
Next articleಮಥುರಾ: ಪೂಜೆಗೆ ಮುಸ್ಲಿಮರ ವಿರೋಧ