ಗೋವಾಕ್ಕೆ ಬಂದಿಳಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್

ಗೋವಾ: ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಗೋವಾಕ್ಕೆ ಆಗಮಿಸಿದ್ದು ಅವರನ್ನು ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಸ್ವಾಗತಿಸಿದರು.
ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಇಂದಿನಿಂದ ಮೂರು ದಿನಗಳ ಕಾಲ ಗೋವಾ ಪ್ರವಾಸದಲ್ಲಿದ್ದಾರೆ, ಈ ಪ್ರವಾಸದ ಸಮಯದಲ್ಲಿ, ಉಪರಾಷ್ಟ್ರಪತಿಗಳು ಮೊರ್ಮುಗಾವೊ ಬಂದರಿಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಬಂದರಿನ ಹೊಸ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಮತ್ತು ಮೊರ್ಮುಗಾವೊ ಬಂದರು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ. ಮೊರ್ಮುಗಾವೊ ಬಂದರಿನಲ್ಲಿ ಕೋಸ್ಟ್ ಗಾರ್ಡ್ ಹಡಗಿನಲ್ಲಿ ಧನ್‌ಕರ್‌ ಅವರು ಭಾರತೀಯ ಕೋಸ್ಟ್ ಗಾರ್ಡ್‌ನ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೇ 22 ರಂದು, ಉಪರಾಷ್ಟ್ರಪತಿಗಳು ಐಸಿಎಆರ್-ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ ಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಅಧ್ಯಾಪಕರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಗೋವಾ ಭೇಟಿಯ ಸಮಯದಲ್ಲಿ, ಉಪರಾಷ್ಟ್ರಪತಿಗಳು ಗೋವಾದ ರಾಜಭವನಕ್ಕೂ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ರಾಜಭವನ ಆವರಣದಲ್ಲಿ ಆಯುರ್ವೇದ ಮತ್ತು ಶಸ್ತ್ರಚಿಕಿತ್ಸೆಗೆ ನೀಡಿದ ವಿಶಿಷ್ಟ ಕೊಡುಗೆಗಳನ್ನು ಸ್ಮರಿಸುವ ಚರಕ ಮತ್ತು ಸುಶ್ರುತ ಅವರ ಪ್ರತಿಮೆಗಳನ್ನು ಉದ್ಘಾಟಿಸಲಿದ್ದಾರೆ.