ಇಳಕಲ್ : ನಗರದ ಬಸವ ಪಬ್ಲಿಕ್ ಶಾಲೆಯ ರಸ್ತೆಯಲ್ಲಿ ಇಬ್ಬರು ಯುವಕರು ಗಾಂಜಾ ಅಮಲಿನಲ್ಲಿ ರಂಪಾಟ ಮಾಡಿದ್ದಾರೆ
ಗಾಂಜಾದ ಅಮಲಿನಲ್ಲಿ ಇದ್ದ ೨೭ ವರ್ಷದ ಮತ್ತು ೨೫ ವರ್ಷದ ಇಬ್ಬರು ಯುವಕರು ಸಾರ್ವಜನಿಕರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿರುವ ಸುದ್ದಿ ತಿಳಿದ ಪಿಎಸ್ ಐ ಷಹಜಹಾನ ನಾಯಕ ಮತ್ತು ಪೋಲಿಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನು ಬಂಧಿಸಿಕೊಂಡು ಪೋಲಿಸ್ ಠಾಣೆಗೆ ಕರೆ ತಂದಿದ್ದಾರೆ.
ಇಬ್ಬರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನಂತರ ಅವರ ಮೇಲೆ ಕಲಂ ೨೭ ಬಿ ಎಸ್ ಡಿಪಿಎಸ್ ಕಾಯ್ದೆ ೧೯೮೫ ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.