ಗಮನ ಸೆಳೆದ ಗಾಂಧೀಜಿ ವೇಷಧಾರಿ

0
24

ಬೆಳಗಾವಿ: ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ವೇಷಧಾರಿಯೊಬ್ಬರು ಗಮನ ಸೆಳೆದಿದ್ದಾರೆ.
ಇಲ್ಲಿನ ಕಾಂಗ್ರೆಸ್ ಭವನದ ಆವರಣದಲ್ಲಿ ಮಹಾತ್ಮ ಗಾಂಧೀಜಿ ವೇಷಧಾರಿ ಆರ್. ಸಂಪರಾಜ್ ಅವರನ್ನು ಕಂಡು ಎಲ್ಲರೂ ಪುಳಕಿತರಾದರು. ಅಭಿಮಾನಿಗಳು ಅವರೊಂದಿಗೆ ಫೋಟೊ ಕ್ಲಿಕಿಸಿಕೊಂಡು ಸಂಭ್ರಮಿಸಿದರು.
ಇಡೀ ವಿಶ್ವಕ್ಕೇ ಶಾಂತಿ ಸಂದೇಶ ಸಾರಿದ ನಮ್ಮ ನೆಚ್ಚಿನ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರ ಸಮಾನತೆ, ಏಕತೆಯ ಸಂದೇಶ, ದೀನ ದಲಿತರ ಪರವಾದ ನಿಲುವು, ಅವರಿಗಿದ್ದ ಸಮಭಾವ ಹೀಗೆ ಎಲ್ಲವೂ ಹಿಂದಿಗೂ-ಇಂದಿಗೂ-ಮುಂದೆಯೂ ನಿತ್ಯ ನಿರಂತರವಾದವು. ಹೀಗಾಗಿಯೇ ಮಹಾತ್ಮ ಗಾಂಧೀಜಿ ಅವರೇ ಹೇಳಿರುವಂತೆ ಅವರ ಜೀವನವೇ ಒಂದು ಸಂದೇಶವಾಗಿದೆ. ನಮ್ಮ ನಾಡಿನಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಿರುವುದು ಸಂಸತವಾಗಿದೆ ಎಂದು ಅಭಿಮಾನಿಗಳು ತಿಳಿಸಿದರು.

Previous articleಪತ್ನಿ ಶೀಲ ಶಂಕಿಸಿ ಕೊಲೆಗೈದ ಪತಿ
Next articleಸಿಡಬ್ಲ್ಯುಸಿ ಸಭೆಗೆ ಸೋನಿಯಾ, ಪ್ರಿಯಾಂಕಾ ಗೈರು