ಗಂಗೆ, ಕಾವೇರಿ, ಯಾರ ಸ್ವತ್ತು ಅಲ್ಲ…

0
12

ಕುಂಭಮೇಳಕ್ಕೆ ಹೋಗುವುದು ಬಿಡುವುದು ನನ್ನ ವೈಯಕ್ತಿಕ ವಿಚಾರ

ಬೆಂಗಳೂರು: ಗಂಗೆ, ಕಾವೇರಿ, ಕೃಷ್ಣ ಮತ್ತು ಭ್ರಹ್ಮಪುತ್ರ ನದಿಗಳು ಯಾರ ಸ್ವತ್ತು ಅಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕುಂಭಮೇಳಕ್ಕೆ ಹೋಗುವುದು ಬಿಡುವುದು ನನ್ನ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ನಂಬಿಕೆ, ಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಎಲ್ಲರಿಗೂ ಅವರದ್ದೇ ಆದ ಭಕ್ತಿ ನಂಬಿಕೆಗಳು ಇರುತ್ತವೆ, ಇದು ನಮ್ಮ ಧರ್ಮ-ಕರ್ಮ, ನಮ್ಮ ಆಚಾರ-ವಿಚಾರ ಮತ್ತು ನಮ್ಮ ನಂಬಿಕೆ. ಗಂಗೆ, ಕಾವೇರಿ, ಕೃಷ್ಣ ಮತ್ತು ಭ್ರಹ್ಮಪುತ್ರ ನದಿಗಳು ಯಾರ ಸ್ವತ್ತು ಅಲ್ಲ. ಹಾಗಾದರೆ, ಅವರು ಅಶೋಕ್ ಅಂತ ಯಾಕೆ ಹೆಸರು ಇಟ್ಟುಕೊಂಡಿದ್ದಾರೆ. ಅಶೋಕ್ ಬದಲು ಕಲ್ಲು ಮಣ್ಣು ಎಂದು ಹೆಸರು ಇಟ್ಟುಕೊಳ್ಳಬಹುದಲ್ಲ. ನನ್ನ ನಂಬಿಕೆ ಬಗ್ಗೆ ಮಾತಾಡುವ ಅಶೋಕ್ ಅವರಿಗೆ ಏನೋ ಸಮಸ್ಯೆ ಇರಬೇಕು. ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಿ. ನನ್ನ ಹೆಸರು ಹೇಳದಿದ್ರೆ ಕೆಲವರಿಗೆ ನಿದ್ದೆ ಬರುವುದಿಲ್ಲ ಉತ್ಸಾಹ ಬರಲ್ಲ ಎಂದು ಆಕ್ರೋಶಗೊಂಡರು. ಪ್ರಪಂಚದಲ್ಲಿ ಹಲವಾರು ಧಾರ್ಮಿಕ ಆಚರಣೆ, ನಂಬಿಕೆಗಳಿವೆ. ನಾನು ನನ್ನ ದೇವರನ್ನು ನಂಬುತ್ತೇನೆ. ಕೆಲವರು ಹಸ್ತ ನೋಡಿಕೊಳುತ್ತಾರೆ, ಇನ್ನೂ ಕೆಲವರು ನೀರು, ಆಕಾಶ, ಸೂರ್ಯನನ್ನು ನಂಬುತ್ತಾರೆ. ಇದರಲ್ಲಿ ಸರಿ ತಪ್ಪು ಎಂಬುದಿಲ್ಲ ಅವರವರ ನಂಬಿಕೆ ಅಷ್ಟೇ, ಕುಂಭಮೇಳಕ್ಕೆ ಹೋಗುವುದು ಬಿಡುವುದು ನನ್ನ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ನಂಬಿಕೆ, ಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಎಲ್ಲರಿಗೂ ಅವರದ್ದೇ ಆದ ಭಕ್ತಿ, ನಂಬಿಕೆಗಳು ಇರುತ್ತವೆ ಎಂದರು.

Previous articleಅಮೆರಿಕಾದಿಂದ ಭಾರತಕ್ಕೆ ಮರಳಿದ 104 ಅಕ್ರಮ ವಲಸಿಗರು
Next articleರಾಜ್ಯಾಧ್ಯಕ್ಷ ಅವಕಾಶ ಕೊಟ್ಟರೆ ಭಿನ್ನಾಭಿಪ್ರಾಯ ಶಮನ ಮಾಡುವೆ