ಖ್ಯಾತ ಯೋಗ ಗುರು ಶರತ್ ಅಂತ್ಯಸಂಸ್ಕಾರ

0
10

ಮೈಸೂರು: ಇತ್ತೀಚೆಗೆ ಅಮೆರಿಕದ ವರ್ಜೀನಿಯಾದಲ್ಲಿ ಯೋಗ ತರಗತಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದ ನಗರದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಆರ್. ಶರತ್ ಜೋಯಿಸ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮೈಸೂರು ನಗರದ ಗೋಕುಲಂ ಚಿತಾಗಾರದಲ್ಲಿ ನಡೆಯಿತು. ಅಮೆರಿಕದಿಂದ ಶರೀರವನ್ನು ಬೆಂಗಳೂರಿಗೆ ವಿಮಾನದಲ್ಲಿ ತರಲಾಗಿತ್ತು. ನಗರದ ವಿವಿ ಮೊಹದಲ್ಲಾದಲ್ಲಿನ ಅವರ ನಿವಾಸಕ್ಕೆ ತಂದು ಬಳಿಕ ಸಾರ್ವಜನಿಕರು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು, ಸೋಮವಾರ ಬೆಳಗ್ಗೆ ಅಂತ್ಯವಿಧಿಗಳು ನಡೆದವು. ಈ ವೇಳೆ ಆದಿಚುಂಚನಗಿರಿ ಮಠದ ಸೋಮನಾಥಾನಂದ ಸ್ವಾಮೀಜಿ, ಸಂಸದ ಯದು ವೀರ್, ಜಿ.ಟಿ. ದೇವೇಗೌಡ, ಶ್ರೀವತ್ಸ ಹಾಗೂ ಶರತ್ ಅವರ ಅನೇಕ ಸ್ಥಳೀಯ ಹಾಗೂ ವಿದೇಶೀ ಯೋಗ ಶಿಷ್ಯರು ದರ್ಶನ ಪಡೆದರು.

Previous articleಆಪರೇಷನ್ ಕಮಲ: ದಾಖಲೆ ಆಡಿಯೋ ಇದ್ದರೆ ಬಿಡುಗಡೆ ಮಾಡಲಿ
Next articleಬೋಗಸ್ ರೇಷನ್ ಕಾರ್ಡ್ ಪತ್ತೆ: ಜೇನುಗೂಡಿಗೆ ಕಲ್ಲು